
ಶಾಸಕ ದಿನಕರ ಶೆಟ್ಟಿಯವರ ಸಹೋದರಿ ಕರೊನಾ ಸೋಂಕಿಗೆ ಬಲಿ
ಅಂಕೋಲಾದಲ್ಲಿಂದು 14 ಕೇಸ್ : ಗುಣಮುಖ 08 : ಸಕ್ರಿಯ 76
ಕುಮಟಾ: ಕರೊನಾ ಆರ್ಭಟ ಹೆಚ್ಚುತ್ತಲೇ ಇದ್ದು, ಮಹಾಮಾರಿ ಸೋಂಕಿನಿಂದ ಕುಮಟಾ ಶಾಸಕ ದಿನಕರ ಶೆಟ್ಟಿ ಯವರ ಸಹೋದರಿ ಶಾಂತಿ ಶಟ್ಟಿ ರವರು ಸಾವನ್ನಪ್ಪಿದ್ದಾರೆ.
ಕರೊನಾ ಸೋಂಕು ಬಂದ ಹಿನ್ನಲೆಯಲ್ಲಿ ಕುಮಟಾದ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶಾಸಕ ದಿನಕರ ಶೆಟ್ಟಿಯವರಿಗೂ ಕೆಲದಿನಗಳ ಹಿಂದೆ ಸೋಂಕು ದೃಢಪಟ್ಟಿದ್ದು, ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಂಕೋಲಾದ ಕೇಣಿ, ಬಾಸಗೋಡ, ತೆಂಕಣಕೇರಿ, ಬೊಬ್ರುವಾಡ, ಬಾಳೆಗುಳಿ, ಬಳಲೆ, ಅವರ್ಸಾ, ಪೂಜಗೇರಿ, ಜೊಗಳ್ಸೆ, ಅಂಬಾರಕೊಡ್ಲದಲ್ಲಿಯೂ ಸೋಂಕು ಪ್ರಕರಣ
ಅಂಕೋಲಾ : ಕೇಣಿ, ಬಾಸಗೋಡ, ತೆಂಕಣಕೇರಿ, ಬೊಬ್ರುವಾಡ, ಬಾಳೆಗುಳಿ, ಬಳಲೆ, ಅವರ್ಸಾ, ಪೂಜಗೇರಿ, ಜೊಗಳ್ಸೆ, ಅಂಬಾರಕೊಡ್ಲ ಸೇರಿದಂತೆ ತಾಲೂಕಿನಲ್ಲಿ ಮಂಗಳವಾರ ಒಟ್ಟೂ 14 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.
ಸೋಂಕು ಮುಕ್ತರಾದ 8 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದ್ದು, ಹೋಂ ಐಸೋಲೇಶನ್ ನಲ್ಲಿರುವ 53 ಮಂದಿ ಸಹಿತ ಒಟ್ಟೂ 76 ಪ್ರಕರಣಗಳು ಸಕ್ರಿಯವಾಗಿದೆ. ಇಂದು 86 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ರೈತರಿಗೆ ಬೆಳೆವಿಮೆ ಕೊಡಿ: ಕಂಪೆನಿಗೆ ಕೇಂದ್ರದ ಖಡಕ್ ಆದೇಶ
- ಗೋವಿಂದಮೂರ್ತಿ ದೇವರ ವರ್ಧಂತಿ: ಗಮನಸೆಳೆದ “ಶ್ರೀನಿವಾಸ ಕಲ್ಯಾಣ” ಪೌರಾಣಿಕ ನಾಟಕ
- ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ನಾಗರಹಾವು : ಕುಟುಂಬಸ್ಥರು, ಅಕ್ಕಪಕ್ಕದ ಮನೆಯವರಲ್ಲಿ ಆತಂಕ
- ಸಹಸ್ರಾರು ಜನರ ಸಮ್ಮುಖದಲ್ಲಿ ಹೋಳಿ ಗುಡ್ಡೆಗೆ ಬೆಂಕಿ : ಬಂದರಿನಲ್ಲಿ ಗಮನಸೆಳೆದ ಕಾಮದಹನ
- ಹೆಚ್ಚುತ್ತಿರುವ ಅಕ್ರಮ ಗೋಸಾಗಾಟ: ಹಿಂದೂ ಜಾಗರಣಾ ವೇದಿಕೆ ವತಿಯಿಂದ ಮಾರ್ಚ್ 17ರಂದು ಮನವಿ