Follow Us On

Google News
Big News
Trending

ಆಗಸ್ಟ್ 12 ರಂದು ಕ್ಯಾನ್ಸರ್- ವೈದ್ಯಕೀಯ ಜಾಗೃತ ಶಿಬಿರ

ಶಿರಸಿ: ಸ್ಥಳೀಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಅಗಸ್ಟ 12, ಶನಿವಾರ ಮುಂಜಾನೆ 10 ಗಂಟೆಗೆ ವಿಶೇಷ ತಜ್ಞರಿಂದ ಏರ್ಪಡಿಸಿದ‘‘ಕ್ಯಾನ್ಸರ್- ವೈಧ್ಯಕೀಯ ಶಿಬಿರ’ದ ಪ್ರಯೋಜನ ಪಡೆದುಕೊಳ್ಳಬೇಕೆಂದು ಸ್ಪಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಫಂದನಾ ಗ್ರಾಮೀಣಾಭಿವೃದ್ಧಿ ವೇದಿಕೆಯು, ಸಿಟಿ ಯೂನಿಯನ್ ಕ್ರೇಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಲಿ. ಇದರ ಆಶ್ರಯದಲ್ಲಿ ಜಸ್ಟಿಸ್ ಕೆ.ಎಸ್ ಹೆಗ್ಗಡೆ, ಚಾರಿಟೇಬಲ್ ಹಾಸ್ಪಿಟಲ್, ಮಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಜಾಗೃತ ಶಿಬಿರದಲ್ಲಿ ವೈಧ್ಯಕೀಯ ಮಾಹಿತಿಯನ್ನ ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ|| ವಿನಯ್ ಕುಮಾರ್ ಜೆ ರಾಜೇಂದ್ರ, ಮಂಗಳೂರು ಅವರು ನೀಡಲಿದ್ದು, ಕೃಷ್ಟಿ ಶಿರೂರ, ಹಿರಿಯ ಪತ್ರಕರ್ತೆ ಹಾಗೂ ಕ್ಯಾನ್ಸರ್ ರೋಗಿಗಳ ಆಪ್ತ ಸಮಾಲೋಚಕಿ, ಹುಬ್ಬಳ್ಳಿ ಇವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಆಸಕ್ತರು ಹೇಚ್ಚಿನ ಪ್ರಯೋಜನ ಪಡೆದುಕೊಳ್ಳಲು ರವೀಂದ್ರ ನಾಯ್ಕ ಕೋರಿದ್ದಾರೆ.

ವಿಸ್ಮಯ ನ್ಯೂಸ್, ಶಿರಸಿ

Back to top button