Big News
Trending

ಉತ್ತರಕನ್ನಡದಲ್ಲಿ 3ನೇ ಬಲಿ ಪಡೆದ‌ ಕರೊನಾ

ಮಾಹಿತಿ‌ ಮುಚ್ಚಿಟ್ಟಿದ್ದ‌ ಕುಟುಂಬ
ತಪಾಸಣೆ ವೇಳೆ ಸೋಂಕು‌ಪತ್ತೆ

ಕಾರವಾರ: ಈ ಮೊದಲು ಸೇಫ್ ಝೋನ್ ನಲ್ಲಿದ್ದ ಉತ್ತರಕನ್ನಡ ಕರೊನಾ‌ ಜಾಲದಲ್ಲಿ ಸಿಲುಕಿಕೊಳ್ಳುತ್ತಿದೆ. ಒಂದೆಡೆ ಹೆಚ್ಚುತ್ತಿರುವ‌ ಪ್ರಕರಣ, ಇನ್ನೊಂದೆಡೆ ಸಾವಿನ ಪ್ರಕರಣ ಕೂಡಾ ಏರಿಕೆಕಾಣುತ್ತಿದೆ. ಹೌದು, ಕಾರವಾರದಲ್ಲಿ ಕರೊನಾಕ್ಕೆ ವೃದ್ಧೆ ಬಲಿಯಾಗಿದ್ದು,‌ ಈ ಮೂಲಕ ಜಿಲ್ಲೆಯಲ್ಲಿ‌ಸಾವಿನ ಸಂಖ್ಯೆ ಮೂರಕ್ಕೇರಿದೆ.
ಕಾರವಾರ ಕರೊನಾ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ 71 ವರ್ಷದ ವೃದ್ಧೆ ಮೃತಪಟ್ಟಿದ್ದಾಳೆ.

[sliders_pack id=”1487″]

ಕಾರವಾರ ತಾಲೂಕಿನ ನಿವಾಸಿಯಾಗಿರುವ ವೃದ್ಧೆ ಮೂತ್ರಪಿಂಡದ ಸಮಸ್ಯೆಯಿಂದಾಗಿ ಜಿಲ್ಲಾ ಆಸ್ಪತ್ರೆಗೆ ಕೆಲ ದಿನಗಳ ಹಿಂದೆ ದಾಖಲಾಗಿದ್ದರು‌. ಆದರೆ,‌
ಈಕೆ ಮಂಗಳೂರಿಗೆ ಹೋಗಿ ಬಂದಿದ್ದು ಹಾಗೂ ಜ್ವರ ಇರುವುದನ್ನು ಕುಟುಂಬಸ್ಥರು ಮುಚ್ಚಿಟ್ಟಿದ್ದರು‌ ಎನ್ನಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಜ್ವರ ಇರುವುದು ಕಂಡುಬಂದಿದ್ದು, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ,‌ಸೋಂಕು ದೃಢಪಟ್ಟಿತ್ತು. ಈ ವೇಳೆ ಸೋಂಕು ದೃಢಪಟ್ಟಿರುವುದಾಗಿ ನಿನ್ನೆ ವರದಿ ಬಂದಿತ್ತು. ಆದರೆ,‌ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

  • ಈಕೆ ಪರೀಕ್ಷೆಗೊಳಪಟ್ಟಿದ್ದ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯ ಹಾಗೂ ಸ್ಯ್ಕಾನ್ ಸೆಂಟರ್ ನ ಸಿಬ್ಬಂದಿಗೆ ಸೋಂಕು ಇರುವುದು ಪತ್ತೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ‌ ನ್ಯೂಸ್

Back to top button