Big News
Trending

ತಡರಾತ್ರಿ 108 ವಾಹನದಲ್ಲೇ ಹೆರಿಗೆ

108 ಸಿಬ್ಬಂದಿಗಳಿಗೆ ಎಲ್ಲರ‌ ಮೆಚ್ಚುಗೆ
ಆರೋಗ್ಯವಾಗಿದ್ದಾರೆ‌ ತಾಯಿ,ಮಗು

[sliders_pack id=”1487″]

ಜೊಯಿಡಾ: ದಾಂಡೇಲಿಯಿಂದ ಗರ್ಭಿಣಿಯನ್ನು ೧೦೮ ವಾಹನದಲ್ಲಿ ಸಿಬ್ಬಂದಿಗಳು ಧಾರವಾಡ ಸಿವಿಲ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮದ್ಯೆ ವಾಹನದಲ್ಲಿಯೇ ಹೆರಿಗೆ ಮಾಡಿಸಿದ ಘಟನೆ ತಡ ರಾತ್ರಿ ನಡೆದಿದೆ.
ಜೊಯಿಡಾ 108 ಸಿಬ್ಬಂದಿಗಳು ದಾಂಡೇಲಿಯ ಖಾಸಗಿ ಆಸ್ಪತ್ರೆಯಿಂದ ಸುಮಿಯಾ ಖಾನ್ ಎನ್ನುವ 31 ವರ್ಷದ ಗರ್ಭಿಣಿಯನ್ನು ಧಾರವಾರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ತೀವ್ರ ಪ್ರಸವ ವೇದನೆಯಿಂದ ಬಳಲುತ್ತಿದ್ದು,ಹಳಿಯಾಳ ಧಾರವಾಡ ಮಧ್ಯೆ ಟಿ.ಆರ್ ನಗರದ ಸಮೀಪ ಗುರುವಾರ ತಡ ರಾತ್ರಿ 1:22 ಘಂಟೆಯ ಸಂದರ್ಬ ವಾಹನದಲ್ಲಿಯೆ‌ 108 ಸಿಬ್ಬಂದಿ ದೇವಲಾ ನಾಯ್ಕ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ. ಸದ್ಯ ಧಾರವಾಡ ಆಸ್ಪತ್ರೆಯಲ್ಲಿ ತಾಯಿ ಮಗು ಆರೋಗ್ಯದಿಂದ ಇದ್ದಾರೆ ಎಂದು ತಿಳಿದು ಬಂದಿದೆ. 108 ಸಿಬ್ಬಂದಿಗಳಾದ ದೇವಲಾ ನಾಯ್ಕ ಮತ್ತು ಶರತ ವೇಳಿಪ ಇವರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ವಿಸ್ಮಯ ನ್ಯೂಸ್‌ ಜೋಯಿಡಾ

Back to top button