Follow Us On

WhatsApp Group
Uttara Kannada
Trending

ಜಿಲ್ಲೆಯಲ್ಲಿಂದು 33 ಕರೊನಾ ಕೇಸ್

ಮುಂಡಗೋಡ - 13
ಕಾರವಾರ - 10
ಶಿರಸಿ - 1
ಹೊನ್ನಾವರ - 1
ಹಳಿಯಾಳ - 8
[sliders_pack id=”1487″]

ಕಾರವಾರ: ಉತ್ತರನ್ನಡ ಜಿಲ್ಲೆಯಲ್ಲಿ ಇಂದು 33 ಮಂದಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಮುಂಡಗೋಡಿನಲ್ಲಿ ಅತಿಹೆಚ್ಚು ಅಂದರೆ 13 ಪ್ರಕರಣ ದಾಖಲಾಗಿದೆ. ಕಾರವಾರ 10, ಹಳಿಯಾಳದಲ್ಲಿ 8 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ, ಶಿರಸಿ ಮತ್ತು ಹೊನ್ನಾವರದಲ್ಲಿ ಒಂದು ಪ್ರಕರಣ ದೃಢಪಟ್ಟಿದೆ. ಕಾರವಾರದಲ್ಲಿ ಪತ್ತೆಯಾದ 10 ಪ್ರಕರಣಗಳಲ್ಲಿ ಬಹುತೇಕರಿಗೆ ಸೋಂಕಿನ ಮೂಲ ಪತ್ತೆಯಾಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ. ಶಿರಸಿಯ 28 ವರ್ಷದ ಮಹಿಳೆಯಲ್ಲಿ( ಹೆಲ್ತ್ ಸ್ಟಾಪ್ ) ಸೋಂಕು ಕಾಣಿಸಿಕೊಂಡಿದೆ.

ಹೊನ್ನಾವರದ ಹಳದೀಪುರದಲ್ಲಿ ಮತ್ತೊಂದು ಸೋಂಕು

ಹೊನ್ನಾವರ ತಾಲೂಕಿನ ಹಳದೀಪುರದ 80 ವರ್ಷದ ಪುರುಷನಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿರುವ ಮಾಹಿತಿ ಬಂದಿದೆ. ಈ ಸೋಂಕಿತ ವ್ಯಕ್ತಿ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ ಎನ್ನಲಾಗಿದೆ.

ಮುಂಡಗೋಡಿನಲ್ಲಿ ಇಂದು 13 ಪ್ರಕರಣ

ಮುಂಡಗೋಡಿನಲ್ಲಿ ಇಂದು 13 ಕರೊನಾ ಪ್ರಕರಣಗಳು ದೃಢಪಟ್ಟಿವೆ. ಪಟ್ಟಣದಲ್ಲಿ 11 ಲಕ್ಕೋಳ್ಳಿ ಗ್ರಾಮದಲ್ಲಿ 1 ಹಾಗೂ ಟಿಬೇಟಿಯನ್ ಕ್ಯಾಂಪನಲ್ಲಿ 1 ಒಟ್ಟು 13 ಕೋವಿಡ-19 ಪ್ರಕರಣಗಳು ಪತ್ತೆಯಾಗಿದೆ. ಬಸವನ ಬೀದಿಯಲ್ಲಿ ಈ ಹಿಂದೆ ದೃಢಪಟ್ಟಿದ್ದ ತಂದೆ ಮಗಳ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಅವರ ಕುಟುಂಬ ಒಂಬತ್ತು ಜನರು ಹಾಗೂ ಇನ್ನೂ ಇಬ್ಬರು ಸೇರಿದಂತೆ ಒಟ್ಟು 11 ಜನರಿಗೆ ಸೋಂಕು ಖಚಿಗೊಂಡಿದೆ. ಇದರಲ್ಲಿ 7 ಬಾಲಕಿ ಹಾಗೂ 8 ವರ್ಷದ ಬಾಲಕಿ ಸೇರಿದ್ದಾರೆ ಎನ್ನಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button