Follow Us On

Google News
Focus News
Trending

Pulse Polio: ಮಾರ್ಚ್ 2 ರಂದು ಪಲ್ಸ್ ಪೊಲಿಯೋ: ಲಸಿಕೆ ಹಾಕಿಸಲು ಮರೆಯದಿರಿ

ಕಾರವಾರ: ಮಾರ್ಚ್ 3 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ನಿಗದಿತ ಗುರಿಯಂತೆ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಫಲ್ಸ್ ಪೋಲಿಯೋ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಮಗು ಪೋಲಿಯೋ ಲಸಿಕೆ ಪಡೆಯುವದರಿಂದ ವಂಚಿತವಾಗದoತೆ ಎಚ್ಚರ ವಹಿಸಬೇಕು ಎಂದರು. ಜಿಲ್ಲೆಯ 98.473 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ 833 ಲಸಿಕಾ ಕೇಂದ್ರಗಳನ್ನು, 32 ಟ್ರಾನ್ಸಿಸ್ಟ್ ತಂಡಗಳನ್ನು, 3630 ಲಸಿಕೆ ನೀಡುವ ಸಿಬ್ಬಂದಿ, 211 ಸೂಪರ್ ವೈಸರ್‌ಗಳನ್ನು ನಿಯೋಜಿಸಲಾಗಿದೆ.

ಈ ಕಾರ್ಯಕ್ಕಾಗಿ 190 ವಾಹನಗಳ ಅಗತ್ಯವಿದ್ದು ಎಲ್ಲ ಇಲಾಖೆಗಳು ಅಗತ್ಯ ಸಹಕಾರ ನೀಡುವ ಮೂಲಕ ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡುವ ಸಂಪೂರ್ಣ ಗುರಿ ಸಾಧನೆಗೆ ಸಹಕರಿಸುವಂತೆ ತಿಳಿಸಿದರು. ಪೊಲೀಯೋ ಕಾರ್ಯಕ್ರಮದ ಕುರಿತಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, 5 ವರ್ಷದೊಳಗಿನ ಮಕ್ಕಳ ತಾಯಂದಿರಿಗೆ ಮಾಹಿತಿ ನೀಡಬೇಕು.

ಶಾಲೆಗಳಲ್ಲಿ ಜಾಗೃತಿ ಜಾಥಾ ನಡೆಸಬೇಕು ಎಂದು ತಿಳಿಸಿದರು. ರೋಟರಿ, ಲಯನ್ಸ್, ರೆಡ್ ಕ್ರಾಸ್ ಸೇರಿದಂತೆ ಎಲ್ಲಾ ಸ್ವಯಂ ಸೇವಾ ಸಂಘಟನೆಗಳು ಜಿಲ್ಲೆಯಲ್ಲಿ ನಡೆಯುವ ಪಲ್ಸ್ ಪೊಲೀಸಯೋ ಕಾರ್ಯಕ್ರಮಕ್ಕೆ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ್ದಾರೆ.

ಬ್ಯರೋ ರಿಪೋರ್ಟ್, ವಿಸ್ಮಯ ನ್ಯೂಸ್.

Back to top button