ಅಧ್ಯಕ್ಷರಾಗಿ ಯೋಗಿತಾ ಕಾಮತ, ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಖಜಾಂಚಿಯಾಗಿ ಸಂಪದಾ ಗುನಗಾ ಅಧಿಕಾರ ಸ್ವೀಕಾರ
ಇಬ್ರಾಹಿಂ ಕಲ್ಲೂರರವರಿಗೆ ಸಮಾಜ ಪರಿವರ್ತಕ ಪ್ರಶಸ್ತಿ, ನವೀನ್ ದೇವರಭಾವಿಗೆ ವಿಶೇಷ ಪುರಸ್ಕಾರ.
ಅಂಕೋಲಾ : ರೂರಲ್ ರೋಟರಿ ಕ್ಲಬ್ ಆಫ್ ಅಂಕೋಲಾದ 2020-21ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಗುರುವಾರ ಸಂಜೆ ಪಟ್ಟಣದ ಕಾಮತ್‍ಪ್ಲಸ್ ಹೋಟೆಲ್‍ನ ಸಭಾಂಗಣದಲ್ಲಿ ನಡೆಯಿತು.
ಕ್ಲಬ್‍ನ ಅಧ್ಯಕ್ಷರಾಗಿ ಯೋಗಿತಾ ಕಾಮತ, ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್, ಖಜಾಂಚಿಯಾಗಿ ಸಂಪದಾ ಗುನಗಾ ಹಾಗೂ ಸಮಿತಿಯ ಇತರೆ ಪದಾಧಿಕಾರಿಗಳು ವಿಧ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಇರ್‍ಕಲ್ ಪದಗ್ರಹಣ ಅಧಿಕಾರಿಯಾಗಿ ಉಪಸ್ಥಿತರಿದ್ದು, ನೂತನ ಸಮಿತಿ ಮತ್ತು ಕ್ಲಬ್‍ನ ಕಾರ್ಯ ಚಟುವಟಿಕೆಗೆ ಶುಭ ಹಾರೈಸಿದರು. ರೋಟರಿ ಅಸಿಸ್ಟಂಟ್ ಗರ್ವನರ್‍ಗಳಾದ ರಾಜೇಶ ವೇರ್ಣೇಕರ, ವಿನಾಯಕ ಕಾಮತ, ನಿಕಟ ಪೂರ್ವ ಅಧ್ಯಕ್ಷ ಮೋಹನದಾಸ ಪೈ ಮತ್ತಿತ್ತರರು ಉಪಸ್ಥಿತರಿದ್ದರು.
- ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ರೋಟರಿ ಬುಲೆಟಿನ್ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಇಬ್ರಾಹಿಂ ಕಲ್ಲೂರ್‍ರವರಿಗೆ “ಸಮಾಜ ಪರಿವರ್ತಕ” ಗೌರವ ಪ್ರಶಸ್ತಿ ನೀಡಲಾಯಿತು.
- ಇಬ್ಬರು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
- ಸೇವಾ ಕಾರ್ಯಚಟುವಟಿಕೆಯನ್ನು ಮೆಚ್ಚಿ ರೋ. ನವೀನ್ ದೇವರಭಾವಿಯವರಿಗೆ ‘ಅವೆನ್ಯುಯೆಸ್ ಆರ್ಫ ಸರ್ವಿಸ್’ ವಿಶೇಷ ಪುರಸ್ಕಾರ ನೀಡಲಾಯಿತು. ರೋಟರಿ ಕುಟುಂಬದ ಸದಸ್ಯರು, ಹಿತೈಷಿಗಳು ಪಾಲ್ಗೊಂಡಿದ್ದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.