ದ್ವಿತೀಯ ಪಿ.ಯುಸಿಯಲ್ಲಿ ಉತ್ತಮ ಸಾಧನೆ ತೋರಿದ ಅಂಕೋಲಾದ ಹಿಮಾಲಯ ಕಾಲೇಜ್
ಅಂಕೋಲಾ:ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ, ಪೂಜಗೇರಿಯ ಹಿಮಾಲಯ ಕಾಲೇಜಿನ 2019-20ನೇ ಸಾಲಿನ ಪಿಯುಸಿ ದ್ವಿತೀಯ ವರ್ಷದ ಫಲಿತಾಂಶ ಪ್ರಕಟವಾಗಿದ್ದು ವಿಜ್ಞಾನ ಮತ್ತು ವಾಣಿಜ್ಯ 2ವಿಭಾಗಗಳಲ್ಲಿ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
ವಾಣಿಜ್ಯ ವಿಭಾಗ : ಹರ್ಷಿತಾ ಕಾಮತ (97.30) ಅಂಕ ಗಳಿಸಿ ಕಾಲೇಜ್ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಲ್ಲದೇ ಜಿಲ್ಲೆಗೆ 6ನೇ ರ್ಯಾಂಕ್ ಪಡೆದಿರುತ್ತಾಳೆ. ನಿಶಾ ಕುಡ್ತರಕರ (96.33), ದೀಪಾ ಶೆಟ್ಟಿ (95.33), ಮನಹಲ್ (90.00) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ವಿಜ್ಞಾನ ವಿಭಾಗ: ವೈಷ್ಣವಿ ನಾಯಕ ಪ್ರಥಮ (94.5), ದೀಶಾ ನಾಯಕ ದ್ವಿತೀಯ (94.10), ಸಿಂಚನಾ ಪ್ರಹ್ಲಾದ ಮಾಸ್ಕೇರಿ-ಲಕ್ಷ್ಮೇಶ್ವರ (93.10)ತೃತೀಯ ರ್ಯಾಂಕ್ ಗಳಿಸಿದ್ದಾರೆ. ಅಮೃತಾ ನಾಯಕ (91.00), ದೀಶಾ ಆರ್ ನಾಯಕ(91.00), ಪ್ರಥ್ವಿ ದೇವಾನಂದ ಗಾಂವಕರ(89.20), ಶಾಂಭವಿ ನಾಯಕ(85.00), ದಿಯಾ ನಾಯ್ಕ (84.00), ಶಾರದಾ ನಾಯ್ಕ (84.00), ನಾಗಪ್ರತೀಕ ಮಂಗೇಶಕರ (84.00), ವಿವೇಕ ಪಾಲನಕರ (84.00) ಅಂಕಗಳನ್ನು ಪಡೆದು ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರಥಮ Rank ವಿಜೇತೆಗೆ ಸಿ.ಎ ಮಾಡುವ ಕನಸು: ಲೆಕ್ಕಶಾಸ್ತ್ರ(100), ವ್ಯವಹಾರ ಅಧ್ಯಯನ (100),ಸಂಖ್ಯಾಶಾಸ್ತ್ರ (100), ಅರ್ಥಶಾಸ್ತ್ರ (93), ಇಂಗ್ಲೀಷ (94) ಹಿಂದಿ (97), ಒಟ್ಟಾರೆಯಾಗಿ 600ರಲ್ಲಿ 584 ಅಂಕ ಪಡೆದು ಶೇ.97.3 ಫಲಿತಾಂಶ ದಾಖಲಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡ ಹರ್ಷಿತಾ ಕಾಮತ್ ತನ್ನ ಸಾಧನೆಗೆ ಅಮ್ಮನ ‘ಮಮತೆಯ’ ಕಾಳಜಿಯೇ ಮುಖ್ಯ ಕಾರಣ ಎಂದು ಹೇಳುತ್ತಾ, ಕಾಲೇಜಿನ ಸರ್ವರ ಪ್ರೋತ್ಸಾಹ ನೆನೆಯುತ್ತಾಳೆ. ತನ್ನ ವಿದ್ಯಾಭ್ಯಾಸಕ್ಕೆ ಯಾವುದೇ ಹೆಚ್ಚುವರಿ ಟ್ಯೂಷನ್ ಪಡೆಯದೇ ಸ್ವ ಪ್ರಯತ್ನದಿಂದ ಅಭ್ಯಸಿಸಿ ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿನಿ, ತಾನು ಮುಂದೆ ಚಾರ್ಟೆಡ್ ಅಕೌಂಟಂಟ್ (ಸಿ.ಎ) ಆಗಬೇಕೆಂಬ ಉತ್ಕಟ ಮನೋ ಇಚ್ಛೆಯಿಂದಲೇ, ವಾಣಿಜ್ಯ ವಿಭಾಗ ಆಯ್ದುಕೊಂಡೆ ಎಂದು ತುಂಬು ವಿಶ್ವಾಸದಿಂದ ಹೇಳಿದ್ದಾಳೆ.
ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಹರ್ಷಿತಾಳ ಭವಿಷ್ಯದ ಜೀವನ ಉಜ್ವಲವಾಗಿ ತಾಲೂಕಿನ ಕೀರ್ತಿ ಹೆಚ್ಚಿಸುವಂತಾಗಲಿ ಮತ್ತು ಅವಳ ಕುಟುಂಬದಲ್ಲಿ ಹರ್ಷ ಇನ್ನಷ್ಟು ಹೆಚ್ಚಲಿ ಎನ್ನುವುದು ಹಿತೈಷಿಗಳ ಹಾರೈಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ