Focus NewsImportant
Trending

ಚೌತಿ ಸಂಭ್ರಮ ಮುಗಿಸಿದ್ದ ಮನೆಯಲ್ಲಿ ಶೋಕ : ದೈವಭಕ್ತಿ ಪ್ರತಿಬಿಂಬದ ವ್ಯಕ್ತಿತ್ವ ಹೊಂದಿದ್ದ ವ್ಯಕ್ತಿ ಹೃದಯಾಘಾತದಿಂದ ನಿಧನ

ಅನಾಥ ಶವ ಸಂಸ್ಕಾರಕ್ಕೂ ಮುಂದಾಗುತ್ತಿದ್ದ ಹಿರಿಯ ಸಾಮಾಜಿಕ ಕಾರ್ಯಕರ್ತ ಇನ್ನು ನೆನಪು ಮಾತ್ರ

ಅಂಕೋಲಾ: ಪಟ್ಟಣದ ಪ್ರಮುಖ ಸ್ಥಳದಲ್ಲಿ ಕಳೆದ ಕೆಲ ದಶಕಗಳಿಂದ ಪಾನ್ – ಬೀಡಾ ಅಂಗಡಿ ತೆರೆದು, ಆ ಮೂಲಕ  ಪಾನಪಟ್ಟಿ ಸುರೇಶ (ಅಣ್ಣ ) ಎಂದೇ ಚಿರಪರಿಚಿತರಾಗಿದ್ದ ಕಾಕರಮಠ ನಿವಾಸಿ ಸುರೇಶ ಸಾತಪ್ಪ ನಾಯ್ಕ(67) ಅವರು ಹೃದಯಾಘಾತದಿಂದ ನಿಧನರಾದರು.  ಅಪಾರ ದೈವ ಭಕ್ತರಾಗಿದ್ದ ಇವರು ತಮ್ಮ ಮನೆಯಲ್ಲಿ ಚೌತಿ ಗಣೇಶನನ್ನು 5 ದಿನಗಳ ಕಾಲ ಪೂಜಿಸಿ, ರವಿವಾರ ಸಾಯಂಕಾಲ ಗಣಪನ ವಿಸರ್ಜನೆ ನಡೆಸಿದ್ದ ಅವರು ಮಾರನೇ ದಿನವೇ ದೈವಾಧೀನರಾಗುವಂತಾಗಿರುವುದು ಆತನ ಸಾವು ಪುಣ್ಯದ ಸಾವು ಎಂದು ಆತ್ಮೀಯರು ಆತನ ಶೃದ್ಧಾ ಭಕ್ತಿ ಮತ್ತು ಧಾರ್ಮಿಕ ವ್ಯಕ್ತಿತ್ವ ಪ್ರತಿಬಿಂಬಿಸುವ  ನೆನಪಿಸಿಕೊಳ್ಳುತ್ತಿದ್ದಾರೆ. 

ಬೈಕ್ ಹಾಗೂ ಹಾಲು ಸರಬರಾಜು ಮಾಡುವ ವಾಹನದ ನಡುವೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ

ಕಳೆದ 35 ವರ್ಷ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಸತತವಾಗಿ ಶಬರಿಮಲೆ ಯಾತ್ರೆ ಕೈಗೊಂಡು ಹಿರಿಯ ವೃತಾಧಾರಿಯಾಗಿ ಕಿರಿಯ ಮಾಲಾಧಾರಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅಂಕೋಲಾ ಬಂಡಿಹಬ್ಬದ ಸಂದರ್ಭದಲ್ಲಿ ಬಲಿ ಮಕ್ಕಳ ಹರಕೆ ಕಾರ್ಯಕ್ರಮದ ನೇತೃತ್ವ ವಹಿಸಿತ್ತಿದ್ದ ಇವರು ತಾಲೂಕಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಮುಂಚೂಣಿಯಲ್ಲಿದ್ದು ಶ್ರೀ ದೇವರ ಸೇವಾ ಕಾರ್ಯಕ್ಕೆ ಸಹಕರಿಸುತ್ತಿದ್ದರು. ಸ್ಥಳೀಯರ ಸಹಕಾರದಲ್ಲಿ ಕೆಲ ಅನಾಥ ಶವಗಳ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯ ಸಾಮಾಜಿಕ ಕಳಕಳಿ ತೋರಿ ಮಾದರಿಯಾಗಿದ್ದಾರೆ.

ಮೃತರು, ಪತ್ನಿ ,ನಾಲ್ವರು ಪುತ್ರರು, ಸೊಸೆಯಂದಿರು , ಮೊಮ್ಮಕ್ಕಳು ಮತ್ತು ಅಪಾರ ಬಂಧು ಬಳಗ ಅಗಲಿದ್ದಾರೆ.  ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವು ಗಣ್ಯರು ಮೃತರ  ಅಂತಿಮ ದರ್ಶನ ಪಡೆದರು. ಕುಟುಂಬದ ಸದಸ್ಯರು, ಹಿತೈಷಿಗಳು, ಆಪ್ತರು ಸೇರಿದಂತೆ ನೂರಾರು ಜನ ಅಂತಿಮ ದರ್ಶನ ಪಡೆದು,ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button