Important
Trending

ಪಂಪ್‌ಸೆಟ್ ಚಾಲು ಮಾಡಲು ಹೋದಾಗ ಹಾವು ಕಡಿತ: ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಸಾವು

ಕಾರವಾರ: ನಾಲ್ಕೈದು ದಿನಗಳ ಹಿಂದೆ ವಿಷಪೂರಿತ ಹಾವಿನಿಂದ ಕಡಿತಕ್ಕೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಶಿರವಾಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಆನಂದಿ ಕಾಣಕೋಣಕರ ಮೃತಪಟ್ಟ ಮಹಿಳೆ. ಶಾಲಾ ಅವಧಿಯಲ್ಲಿದ್ದಾಗಲೇ ನೀರಿನ ಪಂಪ್‌ಸೆಟ್ ಚಾಲು ಮಾಡಲು ಹೋದಾಗ ಹಾವು ಕೈಗೆ ಕಚ್ಚಿತ್ತು.

ಇದನ್ನೂ ಓದಿ: 669 ಹುದ್ದೆಗಳು: 62 ಸಾವಿರ ಮಾಸಿಕ ಸಂಬಳ: ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಚಿಕಿತ್ಸೆ ನೀಡಿ ಬಳಿಕ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಒಂದು ದಿನದ ಬಳಿಕ ಆರೋಗ್ಯ ಸ್ಥಿತಿ ಸುಧಾರಿಸಿತ್ತು. ಆದರೆ, ತಡರಾತ್ರಿ ಒಂದೇ ಸಮನೆ ಆರೋಗ್ಯ ಹದಗೆಟ್ಟಿದ್ದು, ಮಹಿಳೆ ಮೃತಪಟ್ಟಿದ್ದಾಳೆ.

ವಿಸ್ಮಯ ನ್ಯೂಸ್, ಕಾರವಾರ

Back to top button