Focus News
Trending

ಆಸ್ಪತ್ರೆಯಲ್ಲೇ ಹೃದಯಾಘಾತ: ಉತ್ತಮ ಕ್ರೀಡಾಪಟು, ಸಂಘಟಕ ಇನ್ನಿಲ್ಲ

ಪೂಜಗೇರಿ ಅನಿಲ ಗಾಂವಕರ ವಿಧಿವಶ

ಅಂಕೋಲಾ: ಪೂಜಗೇರಿಯ ಉತ್ಸಾಹಿ ತರುಣನಾಗಿದ್ದ ಅನಿಲ ರಾಮಚಂದ್ರ ಗಾಂವಕರ ( ರವಿವಾರ ಬೆಳಿಗ್ಗೆ ಪಟ್ಟಣದ ಖಾಸಗೀ ಆಸ್ಪತ್ರೆಯಲ್ಲಿ ಹೃದಾಯಾಘಾತದಿಂದ ಅಕಾಲಿಕ ವಾಗಿ ವಿಧಿವಶನಾಗಿದ್ದಾರೆ. ಊರಿನ ಧಾರ್ಮಿಕ, ಕ್ರೀಡೆ , ಸಾಂಸ್ಕೃತಿಕ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದ ಈ ಯುವಕನಿಗೆ ಕಳೆದ 4-5 ದಿನಗಳ ಹಿಂದೆ ಕಾಲು ನೋವು ಕಾಣಿಸಿಕೊಂಡು, ಖಾಸಗಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಉಪಚಾರ ಪಡೆದು ಮನೆಗೆ ಮರಳಿದ್ದರು. ಶನಿವಾರ ದೇಹಾರೋಗ್ಯದಲ್ಲಿ ಏರು ಪೇರಾಗಿ, ಉಸಿರಾಟ ಮತ್ತಿತರ ಸಮಸ್ಯೆ ಕಾಣಿಸಿಕೊಂಡು, ಬೇರೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಿ, ರವಿವಾರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಸಿದ್ಧತೆ ನಡೆಸುತ್ತಿರುವಾಗಲೇ, ಆಸ್ಪತ್ರೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: 669 ಹುದ್ದೆಗಳು: 62 ಸಾವಿರ ಮಾಸಿಕ ಸಂಬಳ: ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಈ ಸುದ್ದಿ ತಿಳಿದ ಪೂಜಗೇರಿ ಗ್ರಾಮಸ್ಥರು ಮತ್ತು ತಾಲೂಕಿನ ಹಲವರು ಆಸ್ಪತ್ರೆಯತ್ತ ಆಗಮಿಸಿ, ಗೆಳೆಯನ ಅಗಲುವಿಕೆಗೆ ತೀವೃ ದುಃಖ ಪಡುತ್ತಿರುವ ದೃಶ್ಯ ಕಂಡು ಬಂತು. ಮೃತ ಅನಿಲ ಗಾಂವಕರ, ತಾಯಿ ಸೇವಂತಿ ಗಾಂವಕರ ಹಾಗೂ ಸಹೋದರರಾದ ಕೃಷ್ಣ ಗಾಂವಕರ ಮತ್ತು ಪ್ರಭಾಕರ ಗಾಂವಕರ ಸೇರಿದಂತೆ ಅಪಾರ ಬಂಧು ಬಳಗ ತೊರೆದಿದ್ದಾರೆ.ಊರಿನ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗರ ಪ್ರೀತಿ ವಿಶ್ವಾಸ ಗಳಿಸಿದ್ದ ಮೃತ ಅನಿಲ ಗಾಂವಕರ, ಇತರರ ಕಷ್ಟ ಸುಖಗಳಲ್ಲಿ ತಾನೂ ಭಾಗಿಯಾಗಿ ಸಾವಿರಾರು ಜನರ ಮನಗೆದ್ದಿದ್ದ. ಉತ್ತಮ ಕ್ರೀಡಾಪಟು, ಸಂಘಟಕನಾಗಿಯೂ ಗುರುತಿಸಿಕೊಂಡಿದ್ದ ಈತ ತನ್ನ ನಗು ಮುಖದ ಹಾಗೂ ಆತ್ಮೀಯ ಮಾತುಗಾರಿಕೆ, ನವಿರು ಹಾಸ್ಯ ಪೃವೃತ್ತಿ ಮೂಲಕವೂ ಗುರುತಿಸಿಕೊಂಡಿದ್ದರು.

ಈತನ ಅಕಾಲಿಕ ನಿಧನಕ್ಕೆ ಹಲವು ಗಣ್ಯರು, ಪ್ರಮುಖರು, ಗೆಳೆಯರ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿ, ಶ್ರೀ ದೇವರು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ರವಿವಾರ ಮಧ್ಯಾಹ್ನ ಪೂಜಗೇರಿ ಗ್ರಾಮದಲ್ಲಿ ನೆರವೇರಿಸಲು ಸಿದ್ಧತೆ ನಡೆದಿದ್ದು, ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ ನಾಯ್ಕ ಆಸ್ಪತ್ರೆಯಿಂದ ಅಂಬುಲೆನ್ಸ್ ಮೂಲಕ ಮೃತ್ ದೇಹ ಸಾಗಿಸಲು ನೆರವಾದರು. ಊರವರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button