Focus News
Trending

ಪ್ರವಾಸ ಪುಸ್ತಕ ಲೋಕಾರ್ಪಣೆ: ಪ್ರಬುದ್ಧ ವಿದ್ವಾಂಸರೇದೇಶದ ಶಕ್ತಿ-ವಿಜಯಾನಂದ ಸ್ವಾಮೀಜಿ

ಕುಮಟಾ: ಸ್ವಾಮಿ ವಿವೇಕಾನಂದರು ಹೇಳುವಂತೆ ಖನಿಜ ಸಂಪತ್ತು, ಮಾರ್ಗ, ಕೈಗಾರಿಕೆಗಳೊಂದಿಗೆಪ್ರಬುದ್ಧ ಪಂಡಿತರ, ಸಾಧಕರ ಸಾಧನೆಯಿಂದ ಮಾತ್ರದೇಶದ ಸಮೃದ್ಧತೆ ನಿರ್ಣಯವಾಗುತ್ತದೆ. ಸಹಸ್ರಾರು ವರ್ಷಗಳಿಂದ ವಿದ್ವಾಂಸರು ಬರೆದ ಮೇರು ಕೃತಿಗಳಿಂದ ಭಾರತದಗೌರವ ವಿಶ್ವಮಾನ್ಯವಾಗಿದೆಎಂದುರಾಮಕೃಷ್ಣಾಶ್ರಮದ ಶ್ರೀ ವಿಜಯಾನಂದ ಸರಸ್ವತೀ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.

ಅವರು ಇತ್ತೀಚೆಗೆ(6-9-2022)ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆ ಪ್ರಕಟಿಸಿದ ‘ಪ್ರವಾಸ ಪಾರಾಯಣ ಸ್ತೋತ್ರ’ ಪುಸ್ತಕದಕನ್ನಡ ಆವೃತ್ತಿಯನ್ನುಧಾರವಾಡದ ಮಾಳಮಡ್ಡಿಯ ಗಾಯತ್ರಿ ಭವನದಲ್ಲಿ ಲೋಕಾರ್ಪಣೆ ಮಾಡಿ ಮಾತನಾಡುತ್ತಪ್ರವಾಸದ ಅನುಭವಗಳನ್ನು ಬರೆದ ಅದೆಷ್ಟೋ ಪುಸ್ತಕಗಳನ್ನು ನೋಡಿದ್ದೇವೆ. ಆದರೆ ಆಧ್ಯಾತ್ಮಿಕ ಪ್ರವಾಸದ ಪೂರ್ವಸಿದ್ಧತೆಗಾಗಿ ಸಮಗ್ರ ಭಾರತದ ಆಸ್ತಿಕರನ್ನು ಗಮನದಲ್ಲಿ ಇಟ್ಟುಕೊಂಡು ಸoಸ್ಕೃತ-ಸoಗೀತ ವಿದ್ವಾನ್‌ ಡಾ. ಕೆ.ಗಣಪತಿ ಭಟ್ಟರು ತಮ್ಮ ತಲಸ್ಪರ್ಶಿಜ್ಞಾನದಿಂದ ಈ ಪುಸ್ತಕ ಕನ್ನಡ-ಹಿಂದಿ ಭಾಷೆಗಳಲ್ಲಿ ರಚಿತವಾಗಿದೆ. ಎರಡು ದಶಕಗಳ ಕಾಲ ಧಾರವಾಡದಜನರಿಗೆ ಸಾಂಸ್ಕೃತಿಕ, ಆಧ್ಯಾತ್ಮಿಕ ರಸದೌತಣ ಉಣಬಡಿಸಿದ ಅವರು ಈಗ ಕುಮಟಾತಾಲೂಕಿನ ಕತಗಾಲದಂತಹ ಗ್ರಾಮದಲ್ಲಿದ್ದರೂ ನಿರಂತರ ಲೇಖನ-ಅಧ್ಯಾಪನ ಚಟುವಟಿಕೆಗಳಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಗದ್ದೆಗೆ ತೆರಳಿದ್ದಾಗ ದಿಡೀರ್ ಕುಸಿದು ಬಿದ್ದು ಮೃತಪಟ್ಟ ಖ್ಯಾತ ಹಿನ್ನಲೆ ಗಾಯಕ

ಅತಿಥಿಗಳು, ಧಾರವಾಡತಾಲೂಕ ಬ್ರಾಹ್ಮಣ ಸಭಾದಅಧ್ಯಕ್ಷ, ನ್ಯಾಯವಾದಿ ಆರ್ ಡಿ ಕುಲಕರ್ಣಿಮತ್ತುವೈದ್ಯೆಡಾ ಸೌಭಾಗ್ಯಕುಲಕರ್ಣಿ ವೇದಿಕೆಯಲ್ಲಿದ್ದರು.ಸಹಸಂಪಾದಕಿಬಹುಭಾಷಾ ವಿದುಷಿ ರೋಹಿಣಿ ಭಟ್ಟ ಪುಸ್ತಕವನ್ನು ಪರಿಚಯಿಸಿದರು.ವಿದ್ಯಾಕದರಮಂಡಲಗಿ ಸ್ವಾಗತಿಸಿದರು. ಗುರುನಾಥ ಇನಾಮದಾರ ಧನ್ಯವಾದಗೈದರು. ಸಂಯೋಜಕರಾಜೀವ ಪಾಟಿಲ ಕುಲಕರ್ಣಿ ನಿರೂಪಿಸಿದರು. ಆರಂಭದಲ್ಲಿ ಒoದು ಗಂಟೆಗಳ ಕಾಲ ಪ್ರಶಿಕ್ಷಿತ ಮಹಿಳೆಯರುವಿವಿಧ ರಾಗಗಳಲ್ಲಿ ಸ್ತೋತ್ರಗಳನ್ನು ಪಠಿಸಿದರು.ರುಕ್ಮಿಣಿ ದೀಕ್ಷಿತ, ಪ್ರೇಮಾಗೌಡ, ರಾಜೇಶ್ವರಿ ನಾಯ್ಕ, ಸುಜಾತಾಕುಲಕರ್ಣಿ, ಭೇರುಲಾಲ ಜೈನ, ಅನಂತಥಿಟೆ, ಸುರೇಶ ನಾಯಕ, ರವೀಂದ್ರ ಹಾಳಿಜೋಳ, ನಾಗರಾಜ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಕುಮಟಾ

Back to top button