Focus NewsImportant
Trending

ರಾತ್ರಿ ಊಟಮಾಡಿ ಮಲಗಿದ್ದವ ಮುಂಜಾನೆಯ ಒಳಗೆ ಸಾವಿಗೆ ಶರಣು

ಭಟ್ಕಳ : ರಾತ್ರಿ ಊಟಮಾಡಿ ಮಲಗಿದ್ದವ ಮುಂಜಾನೆಯ ಒಳಗೆ ಮನೆಯ ಪಕ್ಕದಲ್ಲಿದ್ದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ನಡೆದಿದೆ. ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜೀವನದಲ್ಲಿ ಜಿಗುಪ್ಸೆಗೊಂಡು ಈತ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

ನನ್ನನ್ನು ಅಪಹರಿಸಲಾಗಿತ್ತು, ಅವರಿಂದ ತಪ್ಪಿಸಿಕೊಂಡು ಬಂದೆ! ಕೊನೆಗೆ ಬಯಲಾಯ್ತು ವಿದ್ಯಾರ್ಥಿನಿಯ ಡ್ರಾಮಾ

ಭಟ್ಕಳದ ಬೆಳಕೆ ಹೊನ್ನೆಮಡಿಯಲ್ಲಿ ಈ ಘಟನೆ ನಡೆದಿದ್ದು, ಪದ್ಮಯ್ಯ ತಿಮ್ಮಪ್ಪ ನಾಯ್ಕ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಬೆಳಿಗ್ಗೆ ಮನೆಯವರು ಹೊರಬಂದಾಗ ಗೇರುಮರದಲ್ಲಿ ಸಾವಿಗೆ ಶರಣಾದ ದೃಶ್ಯಕಂಡುಬಂದಿದೆ. ಮೃತ‌ನ ಮಗ ಭಟ್ಕಳ‌ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ವಿಸ್ಮಯ ನ್ಯೂಸ್ ಕಾರವಾರ

Back to top button