Important
Trending

Bike Theft: ಮನೆಗಳ್ಳತನ ಹಾಗೂ ಬೈಕ್ ಕಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಖತರ್ನಾಕ್ ಕಳ್ಳರು ಅರೆಸ್ಟ್: ಎರಡು ಬೈಕ್ ವಶ

ಅಂಕೋಲಾ : ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಡೆದ ಕೆಲ ಬೈಕ್ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ಮತ್ತು ಕೆಲ ಮನೆಗಳ್ಳತನ ಪ್ರಕರಣಗಳನ್ನು ಸವಲಾಗಿ ಸ್ವೀಕರಿಸಿದ್ದ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ಪೋಲೀಸ್ ತಂಡ ಕಳ್ಳರ ಪತ್ತೆಗೆ ಬಲೆ ಬೀಸಿ, ಯಶಸ್ವೀ ಕಾರ್ಯಾಚರಣೆ ಮೂಲಕ ಈದಿಗ ಈರ್ವರು ಕಳ್ಳರನ್ನು ಬಂಧಿಸಿ , ಆರೋಪಿತ ರಿಂದ ಎರಡು ಬೈಕ್ ಗಳನ್ನು ವಶಪಡಿಸಿಕೊಂಡು, ತಾಲೂಕಿನ ಕೆಲ ಬೈಕ್ ಕಳ್ಳತನ ಹಾಗೂ ಕಳ್ಳತನ ಯತ್ನ ಮತ್ತು ಕೆಲ ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ.

ಆಗಸ್ಟ್ 15 ರಂದು ಅಂಕೋಲಾ ಬಸ್ ನಿಲ್ದಾಣದ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿಟ್ಟ (ಕೆ.ಎ 30/ ಎಲ್ 3080) ನೊಂದಣಿ ಸಂಖ್ಯೆಯ ಹೀರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಸೈಕಲ್ ನ್ನು ಯಾರೋ ಕಳ್ಳರು ಕದ್ದೊಯ್ದಿದ್ದಾರೆ ಎಂದು ಬಬ್ರುವಾಡದ ನಿವೃತ್ತ ನೌಕರರೋರ್ವರು ಪೊಲೀಸ್ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ಕಳ್ಳರ ಪತ್ತೆ ಕಾರ್ಯದಲ್ಲಿದ್ದಾಗ ಮಂಗಳೂರಿನ ಬೆಂಗ್ರೆ ನಿವಾಸಿ, ಹಾಲಿ ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ವಾಸವಿರುವ ಡಿ ಜೆ ಅಪರೇಟರ್ ಎನ್ನಲಾದ ಮಹ್ಮದ ಸಲ್ಮಾನ ತಂದೆ ಮಮ್ಮದ್ ಗೌಸ್ (23 ), ಕಾರವಾರ ಕೊಡಿ ಬಾಗದ ಕಾಳಿ ರಿವರ್ ಗಾರ್ಡನ್ ಹತ್ತಿರದ ನಿವಾಸಿ ರೋಹಿತ್ ಆನಂದ್ ಹರಿಜನ ( 21 ) ಇವರೀರ್ವರನ್ನು 28-08 – 23 ರಂದು .ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.

ಮಂಗಳೂರು ಮೂಲದ ಆರೋಪಿ ಮಹ್ಮದ್ ಸಲ್ಮಾನ ಈತನು , ಪೋಲೀಸ್ ತನಿಖೆ ವೇಳೆ ತಿಳಿಸಿದಂತೆ, ತಾನು ಉಡುಪಿಯ ರಂಜಿತ ಪೂಜಾರಿ ಈತನೊಂದಿಗೆ ಅಂಕೋಲಾದ ಹೈವೆ ಬದಿಯ ಅಂಗಡಿ ಮುಂದೆ ನಿಲ್ಲಿ ಸಿಟ್ಟ ಒಂದು ಬೈಕ್ ಕಳ್ಳತನ ಮಾಡಿದ್ದಾಗಿ ಹಾಗೂ ತಾನು ಮತ್ತು ಕಾರವಾರದ ರೋಹಿತ್ ಹರಿಜನ ಸೇರಿಕೊಂಡು ಹಿರೇಗುತ್ತಿಯಲ್ಲಿ ಒಂದು ಮನೆಗಳ್ಳತನ ಮಾಡಿದ್ದಲ್ಲದೇ, ಅಂಕೋಲಾ ಬಸ್ ನಿಲ್ದಾಣದ ಎದುರಿನ ರಸ್ತೆ ಅಂಚಿಗೆ ನಿಲ್ಲಿಸಿಟ್ಟ ಮೋಟಾರ ಸೈಕಲ್ ( ಕೆ.ಎ 30 ಎಲ್ 3080), ಮತ್ತು ಕಾರವಾರದ ಕೋಡಿಬಾಗದ ನದಿವಾಡದಲ್ಲಿ ಒಂದು ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂದಿದ್ದಲ್ಲದೇ, ಪುರಲಕ್ಕಿ ಬೇಣದ ಒಂದು ಮನೆ ಹಾಗೂ ವಂದಿಗೆಯ ಒಂದು ಮನೆಯಲ್ಲಿ ನಿಲ್ಲಿಸಿಟ್ಟ ಬೈಕ ಕಳ್ಳತನಕ್ಕೆ ಯತ್ನಿಸಿರುವುದಾಗಿ ತಿಳಿಸಿರುತ್ತಾನೆ

. ಅಲ್ಲದೇ ಇಬ್ಬರೂ ಆರೋಪಿಗಳು ಸೇರಿ ವಂದಿಗೆ, ಜಮಗೋಡ್, ಶೆಟಗೇರಿಯಲ್ಲಿ ತಲಾ ಒಂದು ಮನೆಯಂತೆ ಒಟ್ಟೂ 3 ಮನೆಕಳ್ಳತನ ಮಾಡಿರುವಾದಾಗಿ ಒಪ್ಪಿಕೊಂಡಿದ್ದಾರೆ. ಜಿಲ್ಲೆಯ ಹಿರಿಯ ಅಧಿಕಾರಿಗಳ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಅಂಕೋಲಾ ಸಿಪಿಐ ಸಂತೋಷ್ ಶೆಟ್ಟಿ ನೇತೃತ್ವದಲ್ಲಿ ಪಿ ಎಸ್ಐ ರವರಾದ ಜಯಶ್ರೀ ಪ್ರಭಾಕರ, ಉದ್ದಪ್ಪ ಧರೆಪ್ಪನವರ, ಸಿಬ್ಬಂದಿಗಳಾದ ಶ್ರೀಕಾಂತ ಕಟಬರ, ವೆಂಕಟ್ರಮಣ ನಾಯ್ಕ, ಮನೋಜ ಡಿ, ಆಸೀಫ್ ಕುಂಕೂರು, ಜಗದೀಶ್ ನಾಯ್ಕ, ಕಿರಣ ನಾಯ್ಕ, ಗುರುರಾಜ ನಾಯ್ಕ, ಸಿ ಡಿ ಆರ್ ವಿಭಾಗದ ಸಿಬ್ಬಂದಿಗಳಾದ ಉದಯ ಗುನಗಾ, ರಮೇಶ ಕಾರ್ಯಚರಣೆ ನಡೆಸಿತ್ತು.

ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಎಸ್ ಪಿ ವಿಷ್ಣುವರ್ಧನ್ ಅಭಿನಂದಿಸಿ ಪ್ರಸಂಶ ವ್ಯಕ್ತಪಡಿಸಿದ್ದಾರೆ.ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದಲೂ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿದೆ. ಇತರೆಡೆಯ ಬೈಕ್ ಕಳ್ಳತನ ಹಾಗೂ ಕಳೆದ ಎರಡು ದಿನಗಳ ಹಿಂದಷ್ಟೇ ನಡೆದ ಕೋಗ್ರೆ ಮನೆಗಳ್ಳತನ ಸೇರಿದಂತೆ ಇತರೆ ಕಳ್ಳತನ ಪ್ರಕರಣಗಳನ್ನೂ ಪೊಲೀಸರು ಅತಿ ಶೀಘ್ರವಾಗಿ ಬೇಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ

Back to top button