Follow Us On

WhatsApp Group
Focus News
Trending

ಒಂದೇ ದಿನದಲ್ಲಿ ಮನೆಗಳ್ಳನ ಬಂಧನ: ಕಳ್ಳತನವಾದ ಚಿನ್ನದ ನಕ್ಲೇಸ್ ಜಪ್ತಿ

ಹೊನ್ನಾವರ: ಮನೆ ಕಳ್ಳತನ ಆರೋಪಿಯನ್ನು ಬಂಧಿಸಿ ಕಳ್ಳತನವಾದ ಚಿನ್ನದ ನಕ್ಲೇಸ್ ಜಪ್ತಿಪಡಿಸಿಕೊಂಡ ಘಟನೆ ಹೊನ್ನಾವರದಲ್ಲಿ ನಡೆದಿದೆ. ಕರ್ಕಿ ತೊಪ್ಪಲಕೇರಿ ಮನೆಯೊಂದರಲ್ಲಿ ಚಿನ್ನದ ನಕ್ಲೇಸ್ ಹಾಗೂ 10 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಈ ಸಂಬoಧ ಜೂನ್ 29 ರಂದು ಹೊನ್ನಾವರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣ ದಾಖಲಾದ ಒಂದೇ ದಿನದೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಹಾನಗಲ್ ನ ಸಚಿನ್ ಎಂದು ಗುರುತಿಸಲಾಗಿದೆ. ಈತನ್ನು ದಸ್ತಗಿರಿ ಮಾಡಿದ್ದು ಆರೋಪಿತನಿಂದ 18 ಗ್ರಾಂ ತೂಕದ ಅಂದಾಜು 82 ಸಾವಿರ ರೂಪಾಯಿ ಮೌಲ್ಯದ ಚಿನ್ನದ ನಕ್ಲೇಸ್ ನ್ನು ಜಪ್ತುಪಡಿಸಿಕೊಂಡು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈಗ ಗಾರೆ ಕೆಲಸಕ್ಕಾಗಿ ತೊಪ್ಪಲಕೇರಿಯ ಕೃಷ್ಣ ಜಟ್ಟಿ ಪಟಗಾರ ಎಂಬುವವರ ಮನೆಗೆ ಬಂದಿದ್ದ. ಆದರೆ, ಲಾಕ್ ಡೌನ್ ಆಗಿದ್ದರಿಂದ ಊರಿಗೆ ಹಿಂತುರುಗಲು ಆಗಿರಲಿಲ್ಲ. ಹೀಗಾಗಿ ಮಾನವೀಯ ದೃಷ್ಟಿಯಿಂದ ಕೃಷ್ಣ ಪಟಗಾರ ತಮ್ಮ ಮನೆಯಲ್ಲಿಯೇ ಇಟ್ಟಿಕೊಂಡಿದ್ದರು. ಆದರೆ, ಕೆಲ ಸಮಯದ ನಂತರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಪೊಲೀಸರು ತನಿಖೆ ಆರಂಭಿಸಿದಾಗ ಕಳ್ಳತನದ ವಿಷಯ ಬಹಿರಂಗಗೊoಡಿದೆ.

ಪೊಲೀಸ್ ಉಪಾಧೀಕ್ಷಕರು ಭಟ್ಕಳ ಉಪ ವಿಭಾಗ ಭಟ್ಕಳ ಇವರ ಬೆಳ್ಳಿಯಪ್ಪ ಕೆ.ಯು., ಮಾರ್ಗದರ್ಶನದಲ್ಲಿ ಶ್ರೀಧರ್ ಎಸ್.ಆರ್ ಸಿ.ಪಿ.ಐ ಹೊನ್ನಾವರ ವೃತ್ತ ಇವರ ನೇತೃತ್ವದಲ್ಲಿ ಹೊನ್ನಾವರ ಠಾಣೆಯ ಪಿ.ಎಸ್.ಐ ರವರಾದ ಸಾವಿತ್ರಿ ನಾಯಕ ಪಿ.ಎಸ್.ಐ ಕ್ರೈಂ, ಶಶಿಕುಮಾರ ಪಿ.ಎಸ್.ಐ ಕಾ&ಸು-1, ಮಹಾಂತೇಶ ನಾಯಕ ಪಿ.ಎಸ್.ಐ ಕಾ&ಸು -2, ಶಾಂತಿನಾಥ್ ಪ್ರೊ.ಪಿ.ಎಸ್.ಐ ಹಾಗೂ ಪೊಲೀಸ್ ಸಿಬ್ಬಂದಿಯವರಾದ ರಮೇಶ ಲಮಾಣಿ ಸಿ.ಎಚ್.ಸಿ, ಕೃಷ್ಣ ಗೌಡ ಸಿ.ಎಚ್.ಸಿ, ಮಹಾವೀರ ಸಿ.ಪಿ.ಸಿ, ರಯೀಸ್ ಭಗವಾನ್ ಸಿಪಿಸಿ ಇವರು ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಇವರ ಪತ್ತೆ ಕಾರ್ಯವನ್ನು ಪ್ರಶಂಸಿಸಲಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button