Important
Trending

ಏಪ್ರಿಲ್ 29ರ ವರೆಗೆ ಬಿಸಿಲಾಘಾತ: ಚಿಕ್ಕ ಮಕ್ಕಳು, ವಯೋವೃಧ್ಧರು ಎಚ್ಚರಿಕೆಯಿಂದ ಇರುವಂತೆ ಸೂಚನೆ

ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಏಪ್ರಿಲ್ 26 ರಿಂದ ಏಪ್ರಿಲ್ 29 ರ ವರೆಗೆ ಬಿಸಿಗಾಳಿ ಬೀಸಲಿದೆ, ಬಿಸಿಲಾಘಾತ ಮತ್ತಷ್ಟು ಮುಂದುವರೆಯಲಿದೆ. ಮುಂದಿನ 5 ದಿನಗಳ ಕಾಲ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ವರದಿಯಾಗುತ್ತಿದೆ. ಈ ಮೂಲಕ ಉಷ್ಣದ ಅಲೆಗೆ ಜನರು ಮತ್ತಷ್ಟು ತತ್ತರಿಸುವಂತಾಗಿದೆ.

ಈಗಾಗಲೇ ಬರಗಾಲದಿಂದಾಗಿ ಮಣ್ಣಿನಲ್ಲಿ ತೇವಾಂಶದ ಕೊರತೆ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ತೀರಾ ಕಡಿಮೆಯಾಗುತ್ತಿರುವುದು, ತೇವಾಂಶ ಭರಿತ ಮೋಡಗಳು ಇಲ್ಲದಿರುವುದು ಎಲ್ ನೀನೋ ಪ್ರಭಾವ ಸೇರಿ ಈ ಬಿಸಿಲಿನ ಪ್ರಭಾವ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಚಿಕ್ಕ ಮಕ್ಕಳು, ವಯೋವೃಧ್ಧರು, ದೀರ್ಘಕಾಲದ ಅನಾರೋಗ್ಯ ಪೀಡಿತರು ಈ ಬಿಸಿಲಿನಲ್ಲಿ ಹೊರಗಡೆ ಓಡಾಟ ನಡೆಸಬಾರದೆಂದು ಸೂಚಿಸಲಾಗಿದೆ.

ಬ್ಯೂರೋ ರಿಪೋರ್ಟ ವಿಸ್ಮಯ ನ್ಯೂಸ್

Back to top button