Follow Us On

Google News
Important
Trending

ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ ಚಲನಚಿತ್ರ ನಟ ಶಿವರಾಜ್ ಕುಮಾರ್: ಪತ್ನಿಯೊಂದಿಗೆ ದೇವಿಗೆ ವಿಶೇಷ ಪೂಜೆ ಸಲ್ಲಿಕೆ

ಶಿರಸಿ: ಖ್ಯಾತ ಚಲನಚಿತ್ರ ನಟ ಶಿವರಾಜ್ ಕುಮಾರ್ ತಮ್ಮ ಪತ್ನಿ ಗೀತಾ ಜೊತೆ ನಗರದ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಶಿವರಾಜ ಕುಮಾರ್ ಎಲ್ಲರೂ ತಪ್ಪದೇ ಮತದಾನ ಮಾಡಿ. ಅದು ನಮ್ಮ ಹಕ್ಕು. ವಿಶೇಷವಾಗಿ ಯುವಕರು ಮತದಾನದಿಂದ ದೂರ ವಿರಬಾರದು. ದೇಶಕ್ಕೆ ಒಳಿತಾಗುವುದು ಯುವಕರಿಂದ. ಹಾಗಾಗಿ ಯುವಕರು ತಪ್ಪದೇ ಮತದಾನ ಮಾಡಬೇಕು ಎಂದರು.

ಸರತಿಯಲ್ಲಿ ನಿಂತು ಮತದಾನ ‌ಮಾಡಿದ‌ ಸ್ವರ್ಣವಲ್ಲೀ ಶ್ರೀ

ಶಿರಸಿ: ಹಸಿರು ಸ್ವಾಮಿಜಿ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ‌ ಮಹಾ‌ ಸಂಸ್ಥಾನದ ಮಠಾಧೀಶ‌ ಶ್ರೀಮಜ್ಜಗದ್ಗುರು‌ ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತಿ ‌ಮಹಾ ಸ್ವಾಮೀಜಿಗಳು ತಾಲೂಕಿ‌ನ ಖಾಸಾಪಾಲ ಶಾಲೆಯ‌ ಮತಗಟ್ಟೆಯಲ್ಲಿ ಮತದಾನ ‌ಮಾಡಿದರು. ಶ್ರೀಮಠದಲ್ಲಿ ಪೂಜೆ‌, ಅರ್ಚನೆ, ಅನುಷ್ಠಾನ ಮುಗಿಸಿದ ಬಳಿಕ ಮನನ ಮತಗಟ್ಟೆಗೆ ಬಂದು ಸರತಿಯ‌ ಪ್ರಕಾರ ಮತದಾನ ಮಾಡಿದರು.

ಕಾಂಗ್ರೆಸ್ ಹತಾಶಗೊಂಡಿದೆ: ಮತದಾನದ ಬಳಿಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ

ಶಿರಸಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಾಲೂಕಿನ ಕುಳವೆ-ಬರೂರ ಜನತಾ ವಿದ್ಯಾಲಯದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.  ಬರೂರಿನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಪತ್ನಿ ಹಾಗೂ ಮೂವರು ಪುತ್ರಿಯರೊಂದಿಗೆ ಬೆಳಿಗ್ಗೆ 11 ಘಂಟೆ ಸುಮಾರಿಗೆ ಮತಗಟ್ಟೆಗೆ ಆಗಮಿಸಿದ ಅವರು, ಮತಗಟ್ಟೆ ಸಂಖ್ಯೆ 127 ರಲ್ಲಿ ತಮ್ಮ ಮತ ಚಲಾಯಿಸಿದರು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ನಿ ಭಾರತಿ ಹೆಗಡೆ, ಪುತ್ರಿಯಂದಿರರಾದ ಜಯಲಕ್ಷ್ಮೀ ಹೆಗಡೆ, ರಾಜಲಕ್ಷ್ಮೀ ಹೆಗಡೆ ಹಾಗೂ ಶ್ರೀಲಕ್ಷ್ಮೀ ಹೆಗಡೆ ಮತ ಚಲಾಯಿಸುವ ವೇಳೆ ಸಾಥ್ ನೀಡಿದರು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button