Big News
Trending

ಗುಡ್ಡಗಾಡಿನ ಹಳ್ಳಿ ಪ್ರದೇಶವೊಂದರಲ್ಲಿ ಮಾದರಿ ಮತಗಟ್ಟೆ : ಗಮನಸೆಳೆದ ಸ್ಥಳೀಯ ಬುಡಕಟ್ಟು ಜನರ ಧಮಾಮಿ ನೃತ್ಯ

ಅಂಕೋಲಾ: ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಜಿಲ್ಲೆಯ ಹಲವೆಡೆ ಈಗಾಗಲೇ ಮತದಾನ ಜಾಗೃತಿಗಾಗಿ ಹತ್ತಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು,ಜಿಲ್ಲೆಯಲ್ಲಿ ಒಟ್ಟಾರೆ ಗರಿಷ್ಠ ಪ್ರಮಾಣದ ಮತದಾನದಕ್ಕೆ ಪ್ರಯತ್ನ ಮುಂದುವರಿಸಲಾಗಿದೆ. ಅದರ ಅಂಗ ಎಂಬoತೆ ಅಂಕೋಲಾ ತಾಲೂಕಿನ,ಗಡಿ ಪ್ರದೇಶದಲ್ಲಿರುವ ಡೊಂಗ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕನಹಳ್ಳಿ, ಮತಗಟ್ಟೆ ಸಂಖ್ಯೆ 152 ನ್ನು ಮಾದರಿ ಮತಗಟ್ಟೆಯಾಗಿ ರೂಪಿಸಲಾಗಿದ್ದು, ಮತಕೇಂದ್ರದ ಹೊರಾಂಗಣ ಪ್ರವೇಶ ದ್ವಾರವನ್ನು ಶೃಂಗರಿಸಿ ಅತ್ಯಂತ ಆಕರ್ಷಕವಾಗಿ ಮಾಡಲಾಗಿದೆ.

ಅಷ್ಟೇ ಅಲ್ಲದೇ ಸ್ಥಳೀಯ ಸಿದ್ದಿ ಜನಾಂಗದ ಧಮಾಮಿ ನೃತ್ಯ ಎಂದು ಕರೆಸಿಕೊಳ್ಳುವ ಸಾಂಪ್ರದಾಯಿಕ ಜಾನಪದ ಕುಣಿತ ಅಯೋಜಿಸಲಾಗಿದ್ದು ಮತದಾನ ಕೇಂದ್ರದ ಆಕರ್ಷಣೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ.ಬಿಸಿಲಿನ ಬೇಗೆಯನ್ನು ತಣಿಸಲು ತಂಪು ಪಾನೀಯ, ನೆರಳು, ಆಸನ ಮತ್ತಿತರ ಪೂರಕ ವ್ಯವಸ್ಥೆ ಮಾಡಲಾಗಿದ್ದು ಮತದಾರರು ಖುಷಿಯಿಂದ ಮತದಾನ ಕೇಂದ್ರದ ತ್ತ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದು, ಮಧ್ಯಾಹ್ನ 1:00 ಗಂಟೆ ವೇಳೆಗಾಗಲೇ ಶೇ 60 ಜನರು ಮತದಾನ ಮಾಡಿದ್ದರು.

ವಿಕಲ ಚೇತನರು, ಸ್ಥಳೀಯ ಬುಡಕಟ್ಟು ಜನರು ಮತ್ತಿತರರು,ಮತದಾನ ಕೇಂದ್ರಕ್ಕೆ ಬಂದು ಹೋಗುವ ಮತ್ತು ಇಲ್ಲಿನ ಸಕಲ ಸೌಲಭ್ಯಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ,ಖುಷಿಯಿಂದ ಮತದಾನ ಮಾಡುತ್ತಿರುವುದಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ ಮಾರ್ಗದರ್ಶನದಲ್ಲಿ, ಮಾದರಿ ಮತದಾನ ಕೇಂದ್ರ ರೂಪುಗೊಂಡಿದ್ದು ಹಬ್ಬದ ಕಳೆ ಬಂದoತಾಗಿರುವುದಕ್ಕೆ,ಗ್ರಾಮದ ಪ್ರಮುಖರು ಹಾಗೂ ಕೆಲ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button