Follow Us On

WhatsApp Group
Important
Trending

ಶೆಟರ್ ಮುರಿದು ಫೋಟೋ ಸ್ಟುಡಿಯೋಗೆ ಕನ್ನ: ಬೆಲೆ ಬಾಳುವ ಕ್ಯಾಮೆರಾ ದೋಚಿದ ಕಳ್ಳರು

ಶಿರಸಿ: ನಗರದ ಸುಭಾಶ್ಚಂದ್ರ ಬೋಸ್ ಸಂಕೀರ್ಣದಲ್ಲಿರುವ ಫೋಟೊ ಸ್ಟುಡಿಯೋ ಒಂದರ ಶಟರ್ ಮುರಿದು ಗಾಜು ಒಡೆದು ಒಳ ನುಗ್ಗಿದ ಕಳ್ಳರು ಸುಮಾರು ಒಂದು ಲಕ್ಷ ರೂ. ಬೆಲೆಯ ಕ್ಯಾಮರಾ ಕಳುವು ಮಾಡಿ ಪರಾರಿಯಾಗಿದ್ದಾರೆ. ಕಳ್ಳತನವಾದ ಸ್ಟುಡಿಯೋ ನಗರದ ಹೃದಯ ಭಾಗದಲ್ಲಿದೆ. ಜನ ಮತ್ತು ವಾಹನ ಸಂಚಾರವಿರುವ ಪ್ರದೇಶದಲ್ಲಿದ್ದರೂ ಕಳ್ಳರು ಚಾಲಾಕಿತನ ತೋರಿಸಿದ್ದಾರೆ. ಶಟರ್ ಚಾವಿ ಒಡೆದು ಒಳಗೆ ಹೋಗುವಾಗ ಗಾಜು ಅಡ್ಡಿ ಬಂದಿದ್ದರಿoದ ಅದನ್ನು ಒಡೆದು ಒಳಹೋಗಿ ಕ್ಯಾಮರಾ ಎಗರಿಸಿದ್ದಾರೆ.

ಬೆಳಗ್ಗೆ ಎಂದಿನoತೆ ಅಂಗಡಿ ತೆರಯಲು ಬಂದಿದ್ದ ಕೆಲಸಗಾರ ಕಳ್ಳತನವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾನೆ. ಅಂಗಡಿ ಮುಂದಿನ ಶಟರ್‌ಗೆ ಹಾಕಲಾಗಿದ್ದ ಚಾವಿ ಒಡೆದು ಬಿದ್ದಿತ್ತು. ಅಲ್ಲದೆ, ಶಟರ್ ಮೇಲೆತ್ತಿ ನೋಡಿದಾಗ ಗ್ಲಾಸ್ ಒಡೆದಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ

ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ

Back to top button