Big News
Trending

Auto Drivers: ಆಟೋರಿಕ್ಷಾ, ಗೂಡ್ಸ್ ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರಿಗೆ ಔತಣಕೂಟ

ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜನೆ

ಯಲ್ಲಾಪುರ: ಈಗಾಗಲೇ ಹೊನ್ನಾವರ, ಶಿರಸಿ ಭಾಗದಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿ, ಸಮಾಜಮುಖಿ ಕಾರ್ಯದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ , ಇದೀಗ ಯಲ್ಲಾಪುರದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆಗಸ್ಟ್ 22 ರಂದು ಯಲ್ಲಾಪುರ ತಾಲೂಕಾ ಆಟೋರಿಕ್ಷಾ ( Auto Drivers) , ಗೂಡ್ಸ್ ರಿಕ್ಷಾ, ಟ್ಯಾಕ್ಸಿ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಆಟೋರಿಕ್ಷಾ ( Auto Drivers) ಪಾಸಿಂಗ್ ಯೋಜನೆ ಹಾಗು ಆಟೋ ರಿಕ್ಷಾ ಪ್ರಿಂಟಿoಗ್ ಹುಡ್ ಅನ್ನು ವಿತರಿಸಲಾಗುವುದು. ಯಲ್ಲಾಪುರದ ಅಡಿಕೆ ಭವನದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ, ಆತಿಥ್ಯ ಸ್ವೀಕರಿಸಬೇಕಾಗಿ ಕೋರುತ್ತಾ, ಆಮಂತ್ರಿಸುತ್ತಿದ್ದೇನೆ. ಸರ್ವರಿಗೂ ಸ್ವಾಗತ ಕೋರುವವರು, ಅನಂತಮೂರ್ತಿ ಎಮ್ ಹೆಗಡೆ, ಸಂಸ್ಥಾಪಕರು ಮತ್ತು ಅಧ್ಯಕ್ಷರು, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್, ಬ್ಯಾಗದ್ದೆ, ಶಿರಸಿ

Auto Drivers: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನಿಂದ ಆಯೋಜನೆ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button