Focus News
Trending

Dr A V Baliga College: ಬಾಳಿಗಾ ಕಾಲೇಜಿನ ಅದ್ವಿತೀಯ ಸಾಧನೆ

ಕುಮಟಾ ತಾಲೂಕ ಮಟ್ಟದ ಪದವಿಪೂರ್ವ ಕಾಲೇಜಿನ ಕ್ರೀಡಾಕೂಟ

ಕುಮಟಾ: ಹನುಮಂತ್ ಬೆಣ್ಣೆಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಡಾ. ಏ ವಿ ಬಾಳಿಗಾ ( Dr A V Baliga College) ಪದವಿರ್ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ. ಬಾಲಕಿಯರ ಥ್ರೋಬಾಲ್ ನಲ್ಲಿ ಪ್ರಥಮ,ಬಾಲಕರ ವಾಲಿಬಾಲ್ ದ್ವಿತೀಯ,100 ಮೀ ಓಟದಲ್ಲಿ ಅರ್ಷನ್ ಮೊಹಮ್ಮದ್ ದ್ವಿತೀಯ.ಜಾವಲಿನ್ ಎಸೆತ ವೈಶಾಲಿ ಭಂಡಾರಿ ಪ್ರಥಮ,ಗುಂಡು ಎಸೆತ ದ್ವಿತೀಯಚಕ್ರ ಎಸೆತ ಪ್ರಥಮ, ನಮೃತಾ ಹರಿಕಂತ,400 ಮೀ ಓಟ ಗೌತಮಿ ಹೆಗಡೆ ಪ್ರಥಮ,, ಚೇತನ್ ವಡ್ಡರ್ 400ಮೀ ಹರ್ಡಲ್ಸ್ ಪ್ರಥಮ,200ಮೀ ಸಫ್ವಾನ್ ಉಮಾರ ಸಾಬ್ ದ್ವಿತೀಯ3000 ಮೀ ನಡಿಗೆ ರಕ್ಷಿತಾ ದೇ ಶ ಭಂಡಾರಿ ತೃತೀಯ ಸ್ಥಾನ ಪಡೆದಿದ್ದಾರೆ.

ಇವರ ಈ ಸಾಧನೆಗೆ ( Dr A V Baliga College) ಕೆನರಾ ಕಾಲೇಜು ಸೊಸೈಟಿ ಯ ಕಾರ್ಯಾಧ್ಯಕ್ಷರಾದ ಶ್ರೀ ಡಿ.ಎಂ. ಕಾಮತ್,ಕಾರ್ಯದರ್ಶಿ ಶ್ರೀ ಹನುಮಂತ ಶಾನುಭಾಗ್, ಪ್ರಾಚಾರ್ಯೆ ಶ್ರೀಮತಿವೀಣಾ ಕಾಮತ, ಕ್ರೀಡಾ ಉಪಾಧ್ಯಕ್ಷ ಶ್ರೀ ಮಹಾಬಲೇಶ್ವರ ಅಂಬಿಗ ಹಾಗೂ ಉಪನ್ಯಾಸಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿಶೇಷವಾಗಿ ಈ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿದ ಕ್ರೀಡಾ ನಿರ್ದೇಶಕರಾದ ಜಿ ಡಿ ಭಟ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಿಸ್ಮಯ ನ್ಯೂಸ್, ಕುಮಟಾ

Back to top button