Important
Trending

ಲಾಲ ಚಡ್ಡಾ ಚಲನಚಿತ್ರ ಪ್ರದರ್ಶನಕ್ಕೆ ವಿರೋಧ: ಅಮೀರ್ ಖಾನ್ ನಟನೆಯ ಚಿತ್ರಗಳ ಪ್ರದರ್ಶನ ಮತ್ತು ವೀಕ್ಷಣೆ ಮಾಡದಂತೆ ಭಜರಂಗದಳ ಆಗ್ರಹ ?

ಅಂಕೋಲಾ: ನಟ ಅಮೀರಖಾನ್ ನಟನೆಯ ಲಾಲ್  ಚಡ್ಡಾ ಚಲನಚಿತ್ರವನ್ನು ತಾಲೂಕಿನ ಚಿತ್ರ ಮಂದಿರದಲ್ಲಿ ಪ್ರದರ್ಶಿಸಬಾರದು ಎ೦ದು ಆಗ್ರಹಿಸಿ ಪಟ್ಟಣದಲ್ಲಿ ವಿಶ್ವ ಹಿಂದೂ ಭಜರಂಗದಳದ ವತಿಯಿಂದ ಸಾಂಕೇತಿಕ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ಧಾರರಿಗೆ ಮನವಿ ಸಲ್ಲಿಸಲಾಯಿತು. 

ನಟ ಅಮೀರ್ ಖಾನ್ ಹಿಂದೂ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು ಅಮೀರ್ ಖಾನ್ ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಅಮೀರ್ ಖಾನ್ ತಮ್ಮ ಲಾಲ್ ಸಿಂಗ್ ಚಡ್ಜಾ ಚಲನಚಿತ್ರ ಹಿಂದುಗಳು ನೋಡದಿದ್ದರೂ ಪರವಾಗಿಲ್ಲ ಬಾಕ್ಸ್ ಆಫೀಸ್ ನಲ್ಲಿ ಗೆಲುವು ಸಾಧಿಸಲಿದೆ ಎಂದು  ದುರಹಂಕಾರದ ಹೇಳಿಕೆಗಳನ್ನು ನೀಡಿ ಹಿಂದೂಗಳಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ ಅಂಕೋಲಾದ ಚಿತ್ರ ಮಂದಿರದಲ್ಲಿ ಅಮೀರ್ ಖಾನ್ ನಟನೆಯ ಯಾವುದೇ ಚಲನಚಿತ್ರ ಪ್ರದರ್ಶನ ಮಾಡಿದಲ್ಲಿ ಭಜರಂಗದಳದಿಂದ ವಿರೋಧ ಮಾಡಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. 

ಹಿಂದುಗಳು ಅಮೀರ್ ಖಾನ್ ನಟಿಸಿರುವ ಚಲನಚಿತ್ರಗಳನ್ನು ನೋಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಭಜರಂಗದಳ ಸಂಚಾಲಕ  ಕಿರಣ ನಾಯ್ಕ, ಪ್ರಮುಖರುಗಳಾದ ಸುಂದರ ಖಾರ್ವಿ, ಧೀರಜ ಖಾರ್ವಿ,  ವಿನೋದ ಭಟ್ಟ, ಸಂತೋಷ ನಾರ್ವೇಕರ್, ನಿತ್ಯಾ ನಾಯ್ಕ, ಮಂಗೇಶ ನಾಯ್ಕ, ಆದಿತ್ಯ ನಾಯ್ಕ, ರಂಜಿತ್ ಗಾಂವಕರ್ ಮೊದಲಾದವರು ಪ್ರತಿಭಟನೆಯ ಮುಂದಾಳತ್ವ ವಹಿಸಿ ಮನವಿ ಸಲ್ಲಿಸಿದರು.ತಹಶೀಲ್ದಾರ್ ಉದಯ್ ಕುಂಬಾರ ಮನವಿ ಸ್ವೀಕರಿಸಿದರು. ಅಂಕೋಲಾದ ಪ್ರಭಾರಿ ಸಿಪಿಐ ಗೋವಿಂದರಾಜ, ಟಿ . ದಾಸರಿ, ಪಿಎಸ್ಐ ಗಳಾದ ಪ್ರವೀಣ ಕುಮಾರ, ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button