Big News
Trending
Bhimanna Naik:ಶಿವರಾಮ ಹೆಬ್ಬಾರ್ ಮೊದಲು ಭಂಡ ರಾಜಕಾರಣ ಬಿಡಬೇಕು
ಶಾಸಕ ಭೀಮಣ್ಣ ನಾಯ್ಕ ವಾಗ್ದಾಳಿ

ಶಿರಸಿ: ಯಾವ ಉದ್ದೇಶಕ್ಕಾಗಿ ಶಿವರಾಮ ಹೆಬ್ಬಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ ಎಂಬುದನ್ನು ಜನಸಾಮಾನ್ಯರಿಗೆ ಕಾರ್ಯಕರ್ತರಿಗೆ ತಿಳಿಸಿ ಬರಬೇಕು ಎಂದು ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ( Bhimanna Naik) ವಾಗ್ದಾಳಿ ನಡೆಸಿದರು. ಶನಿವಾರ ನಗರದಲ್ಲಿ ಹೇಳಿಕೆ ನೀಡಿರುವ ಭೀಮಣ್ಣ ನಾಯ್ಕ ( Bhimanna Naik) ಈ ಮೊದಲು ಅಧಿಕಾರಕ್ಕಾಗಿ ಹಣಕ್ಕಾಗಿ ಬಿಜೆಪಿ ಗೆ ಓಡಿ ಹೋದವರು ಇವರು.ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ.ಅದಕ್ಕಾಗಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ.ಯಾವ ಕಾರಣಕ್ಕಾಗಿ ಬರುತ್ತಿದ್ದಾರೆ ಎಂಬುದನ್ನು ಜನಸಾಮಾನ್ಯರಿಗೆ ಹಾಗೂ ಕಾರ್ಯಕರ್ತರಿಗೆ ತಿಳಿಸಿ ಬರಬೇಕು .
- ಬಸ್, ಕಾರಿನ ನಡುವೆ ಭೀಕರ ಅಪಘಾತ: ನಾಲ್ವರು ಸ್ಥಳದಲ್ಲೇ ಸಾವು
- ದೇಶದ ಕಲಾತ್ಮಕ ಸಂಗತಿ ಉಳಿಸಿ ಬೆಳಸುವ ಪ್ರಯತ್ನ: ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ ಈ ತಂಡ
ಅವರದ್ದೇ ಸರ್ಕಾರ ವಿದ್ದರೂ ಬನವಾಸಿ ಭಾಗದಲ್ಲಿ ನೀರಿನ ಯೋಜನೆ ಯನ್ನು ಮುಗಿಸಲು ಸಾಧ್ಯವಾಗಲಿಲ್ಲ.ಅಲ್ಲಿ ಮುಗಿತು ಈಗ ಇಲ್ಲಿಗೆ ಬರುತ್ತಿದ್ದಾರೆ. ಈ ತರಹದ ಬಂಡ ರಾಜಕಾರಣ ಮಾಡುವುದನ್ನು ಬಿಡಲಿ ಎಂದು ಶಿವರಾಮ ಹೆಬ್ಬಾರ ವಿರುದ್ಧ ವಾಗ್ದಾಳಿ ನಡೆಸಿದರು.
ವಿಸ್ಮಯ ನ್ಯೂಸ್, ಶಿರಸಿ