ಭಟ್ಕಳ: ಪ್ರಾಮಾಣಿಕತೆ, ಮಾನವೀಯತೆ ಇಂದಿನ ದಿನಮಾನದಲ್ಲಿ ಮರೆಯಾಗುತ್ತಿದೆ. ಆದ್ರೆ, ಇಲ್ಲೊಬ್ಬರು, ತನಗೆ ಸಿಕ್ಕಿದ ಹಣವನ್ನು ಮರಳಿಸಿ, ಪ್ರಾಮಾಣಿಕತೆ ಮೆರೆದಿದ್ದಾರೆ. ಹೌದು, ರಸ್ತೆಯಲ್ಲಿ ಸಿಕ್ಕಿದ ನಗದುಳ್ಳ ಪರ್ಸ್ ಅನ್ನು ಮರಳಿ ವಾರಸುದಾರರಿಗೆ ಒಪ್ಪಿಸುವ ಮೂಲಕ ಭಟ್ಕಳ ಗ್ರಾಮೀಣ ಠಾಣೆಯ ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಪ್ರಾಮಾಣಿಕತೆ ಮೆರೆದಿದ್ದಾರೆ.
Job News: ನಾಲ್ಕು ಹುದ್ದೆಗಳು ಖಾಲಿ ಇದೆ: ಇಂದೇ ಸಂಪರ್ಕಿಸಿ
ತಾಲೂಕಿನ ರಘುನಾಥ ರಸ್ತೆ ಮೂಲಕ ಠಾಣೆಗೆ ತೆರಳುವ ವೇಳೆ 3500 ನಗದು ಹಾಗೂ ವ್ಯಕ್ತಿಯ ದಾಖಲೆವುಳ್ಳ ಪರ್ಸ್,, ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರಿಗೆ ಸಿಕ್ಕಿತ್ತು. ಬಳಿಕ ಪರ್ಸ್ ನಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿ ಕಳೆದುಕೊಂಡ ವ್ಯಕ್ತಿಗಾಗಿ ಸಂಪರ್ಕಿಸಿದ್ದಾರೆ. ನಂತರ ಪರ್ಸ್ ಕಳೆದುಕೊಂಡ ವ್ಯಕ್ತಿಯನ್ನು ಪತ್ತೆ ಮಾಡಿದ್ದು, ತಾಲೂಕಿನ ರಘುನಾಥ ರಸ್ತೆಯ ಮಣ್ಕುಳಿ ನಿವಾಸಿ ಭಾಸ್ಕರ ನಾಯ್ಕ ಎಂದು ತಿಳಿದು ಬಂದಿದೆ.
ಅವರನ್ನು ಭಟ್ಕಳ ಗ್ರಾಮೀಣ ಠಾಣೆಗೆ ಬರಮಾಡಿಕೊಂಡು ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ ಮುಖಾಂತರ ಪರ್ಸ್ ಅನ್ನು ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮರೆದಿದ್ದಾರೆ. ಸಿ.ಪಿ.ಐ ಚಾಲಕ ದೇವರಾಜ ಮೊಗೇರ ಅವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ