Important
Trending

ಬೆಂಜ್ ಲಾರಿ ಹಾಗೂ ಬಾಡಿಗೆ ಹಣ ಸಮೇತ ನಾಪತ್ತೆಯಾದ ಲಾರಿ ಚಾಲಕ! ಮೊಬೈಲ್ ಸ್ವಿಚ್ ಆಫ್ ಮಾಡಿ ತೆರಳಿದ್ದೆಲ್ಲಿ?

ಅಂಕೋಲಾ: ಚಾಲಕನೋರ್ವ ಆರಂಭದಲ್ಲಿ ನಂಬಿಕೆ ಬರುವಂತೆ ವರ್ತಿಸಿ , ನಂತರ ಬೆಂಜ್ ಲಾರಿ ಸಹಿತ ನಾಪತ್ತೆಯಾಗಿ ಬಾಡಿಗೆ ಹಣವನ್ನೂ ವಂಚಿಸಿದ ಘಟನೆ ತಾಲೂಕಿನಲ್ಲಿ ನಡೆದಿದೆ ಟ್ರಾನ್ಸಪೋರ್ಟ್ ಉದ್ಯಮಿಯೊಬ್ಬರಿಗೆ ಸೇರಿದ ಲಾರಿಯೊಂದಿಗೆ ಲಾರಿಯನ್ನು ಅದರ ಚಾಲಕ ಕಳ್ಳತನ ಮಾಡಿ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಟ್ರಾನ್ಸಪೋರ್ಟ್ ವ್ಯವಹಾರ ನಡೆಸುತ್ತಿರುವ ತಾಲೂಕಿನ ಅವರ್ಸಾ ಗ್ರಾಮದ ನಿವಾಸಿ ಕಿರಣ ಅನಂತ ನಾಯ್ಕ ಅವರ ಬಳಿ ಕುಮಟಾ ತಾಲೂಕಿನ ದಿವಗಿ ನಿವಾಸಿ ರಾಜೇಶ ಕೃಷ್ಣ ನಾಯ್ಕ ಎಂಬಾತ ಕಳೆದ 20 ದಿನಗಳಿಂದ ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಎನ್ನಲಾಗಿದ್ದು ಜನವರಿ 20 ರಂದು ಅವರ್ಸಾದ ಸಂದೀಪ ಮಧುಕರ ನಾಯ್ಕ ಮಾಲಿಕತ್ವದ ಕೆ.ಎ20/ಡಿ1369 ನೋಂದಣಿ ಸಂಖ್ಯೆಯ ಭಾರತ್ ಬೆಂಜ್ ಕಂಪನಿಯ ಲಾರಿಯನ್ನು ಅವರ್ಸಾದಿಂದ ಮಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಕೋಕ್ ಲೋಡ್ ಮಾಡಿ ಗೋವಾದ ಕುಕಳ್ಳಿಯಲ್ಲಿ ಖಾಲಿ ಮಾಡಿದ್ದು ಜನವರಿ 22 ರಂದು ಕುಕಳ್ಳಿಯಿಂದ ಸ್ಟೀಲ್ ಲೋಡ್ ಮಾಡಿ ಹುಬ್ಬಳ್ಳಿಯಲ್ಲಿ ಖಾಲಿ ಮಾಡಿದ್ದಾನೆ.

ಅಲ್ಲಿಂದ ಲಾರಿ ಲೋಡ್ ಮಾಡಿ ಮುರ್ಡೇಶ್ವರಕ್ಕೆ ಬರಬೇಕಿದ್ದವನು ಪೋನ್ ಸ್ವಿಚ್ ಆಫ್ ಮಾಡಿ ಲೋಡ್ ಖಾಲಿ ಮಾಡಿರುವ ಕುರಿತು ಟ್ರಾನ್ಸಪೋರ್ಟ್ ಮಾಲಿಕರಿಗೆ ಯಾವುದೇ ಮಾಹಿತಿ ನೀಡದೇ ಲಾರಿ ಬಾಡಿಗೆ ಹಣ 50 ಸಾವಿರ ರೂಪಾಯಿ ಮತ್ತು ಭಾರತ ಬೆಂಜ್ ಲಾರಿಯೊಂದಿಗೆ ನಾಪತ್ತೆಯಾಗಿದ್ದು ಬಾಡಿಗೆ ಹಣ ಮತ್ತು ಲಾರಿ ಕಳ್ಳತನ ಮಾಡಿ ತೆರಳಿ ನಂಬಿಕೆ ದ್ರೋಹ ಎಸಗಿರುವ ಕುರಿತು ದೂರು ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button