Important
Trending

ಉತ್ತರ ಕನ್ನಡದಲ್ಲಿಂದು 208 ಕೇಸ್ ದಾಖಲು

300 ಮಂದಿ ಗುಣಮುಖರಾಗಿ ಬಿಡುಗಡೆ
ಜಿಲ್ಲೆಯಾದ್ಯಂತ ಮೂವರ ಸಾವು

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು 208 ಜನರಿಗೆ ಕರೊನಾ ದೃಢಪಟ್ಟಿದೆ. ಇಂದಿನ ಹೆಲ್ತ್ ಬುಲೆಟಿನ್ ನಲ್ಲಿ ದಾಖಲಾದಂತೆ, ಕಾರವಾರ 38, ಅಂಕೋಲಾ 12, ಕುಮಟಾ 45, ಹೊನ್ನಾವರ 12, ಭಟ್ಕಳ 6, ಶಿರಸಿ 39, ಸಿದ್ದಾಪುರ 8, ಯಲ್ಲಾಪುರ 22, ಮುಂಡಗೋಡ 10, ಹಳಿಯಾಳ 16 ಕೇಸ್ ದಾಖಲಾಗಿದೆ.

ಇದೇ ವೇಳೆ ಇಂದು ವಿವಿಧ ಆಸ್ಪತ್ರೆಯಿಂದ ಜಿಲ್ಲೆಯಾದ್ಯಂತ 300 ಮಂದಿ ಗುಣಮುಖರಾಗಿ ಬಿಡುಯಾಗಿದ್ದಾರೆ. ಕಾರವಾರ 76, ಅಂಕೋಲಾ 19, ಕುಮಟಾ 15, ಹೊನ್ನಾವರ 38, ಭಟ್ಕಳ 23, ಶಿರಸಿ 28, ಸಿದ್ದಾಪುರ 21, ಯಲ್ಲಾಪುರ 7, ಮುಂಡಗೋಡ 61, ಹಳಿಯಾಳ 8 ಮತ್ತು ಜೋಯ್ಡಾದಲ್ಲಿ ನಾಲ್ವರು ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಾದ್ಯಂತ ಇಂದು ಮೂವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 129ಕ್ಕೆ ಏರಿಕೆಯಾಗಿದೆ. ಇಂದು ಕುಮಟಾ1, ಭಟ್ಕಳ 1, ಹಳಿಯಾಳದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
1159 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು 895 ಜನ ಹೋಮ್ ಐಸೋಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಇಂದು 300 ಜನ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಇಂದು 208 ಕೇಸ್ ದೃಢಪಟ್ಟ ಬೆನ್ನಲ್ಲೆ, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 10,980ಕ್ಕೆ ಏರಿಕೆಯಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Related Articles

Back to top button