Follow Us On

WhatsApp Group
Uttara Kannada
Trending

ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಢ : ಸುಟ್ಟು ಕರಕಲಾದ ದ್ವಿಚಕ್ರ ವಾಹನ

ಅಂಕೋಲಾದಲ್ಲಿಂದು 11 ಕೊವಿಡ್ ಕೇಸ್ : ಗುಣಮುಖ 13 : ಸಕ್ರಿಯ 90
700 ಗಡಿ ದಾಟಿದ ಒಟ್ಟೂ ಸೋಂಕಿತರು : 309 ಗಂಟಲುದ್ರವ ಪರೀಕ್ಷೆ
ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಅವಘಢ : ಸುಟ್ಟು ಕರಕಲಾದ ದ್ವಿಚಕ್ರ ವಾಹನ

ಅಂಕೋಲಾ : ಪಟ್ಟಣದ ಗ್ಯಾರೇಜ್‍ನಲ್ಲಿ ರಿಪೇರಿ ಕೆಲಸಕ್ಕೆ ತಂದಿದ್ದ ದ್ವಿಚಕ್ರ ವಾಹನದ ಬ್ಯಾಟರಿಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬೆಂಕಿಯ ಜ್ವಾಲೆಯಿಂದ ದ್ವಿಚಕ್ರ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಹಳೆ ಬಜಾರದ ಗ್ಯಾರೇಜ್ ಹೊರಗಡೆ ಈ ಆಕಸ್ಮಿಕ ಬೆಂಕಿ ಅವಘಢ ಸಂಭವಿಸಿದ್ದು, ಬೊಬ್ರುವಾಡದ ನಿವಾಸಿಯೋರ್ವರಿಗೆ ಈ ಬೈಕ್ ಸಂಬಂಧಿಸಿದೆ ಎನ್ನಲಾಗಿದೆ.

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕಧಳದವರು ಆಗಮಿಸಿ, ಬೆಂಕಿ ನಂದಿಸಿ ಹೆಚ್ಚಿನ ಅನಾಹುತವಾಗದಂತೆ ತಡೆದರು. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಉಮೇಶ ಎನ್.ನಾಯ್ಕ, ಸಿಬ್ಬಂದಿಗಳಾದ ಜೀವನ ಬಾಬುರಕರ, ಗಣೇಶ ನಾಯ್ಕ, ಗಜೇಂದ್ರ ಬಾಬುರಕರ, ಅಮೀತ್ ನಾಯ್ಕ, ಚಂದ್ರಕಾಂತ ಗೌಡ ಪಾಲ್ಗೊಂಡಿದ್ದರು. ಸ್ಥಳೀಯರು ಸಹಕರಿಸಿದರು.

ಅಂಕೋಲಾದ ಇಂದಿನ‌ ಕರೊನಾ ವಿವರ:

ತಾಲೂಕಿನಲ್ಲಿ ಶುಕ್ರವಾರ ಒಟ್ಟೂ 11 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಹಿಲ್ಲೂರು-ತಿಂಗಳಬೈಲ್, ಅಂಬರಕೊಡ್ಲ, ಬೊಗ್ರಿಗದ್ದೆ, ಬೆಳಂಬರ, ಹೆಗ್ರೆ, ವ್ಯಾಪ್ತಿಯಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ತಾಲೂಕಿನ ಈವರೆಗಿನ ಒಟ್ಟೂ ಸೋಂಕಿತರ ಸಂಖ್ಯೆ 700 ಗಡಿ ದಾಟಿದೆ.

ಸೋಂಕು ಮುಕ್ತರಾದ 13 ಜನರನ್ನು ಬಿಡುಗಡೆಗೊಳಿಸಲಾಗಿದ್ದು, ಹೋಂಐಸೋಲೇಶನಲ್ಲಿರುವ 66 ಮಂದಿ ಸಹಿತ ತಾಲೂಕಿನಲ್ಲಿ ಒಟ್ಟೂ 90 ಪ್ರಕರಣಗಳು ಸಕ್ರಿಯವಾಗಿದೆ. ಇಂದು ತಾಲೂಕಿನ ವಿವಿಧ ಪ್ರದೇಶಗಳಿಂದ ಒಟ್ಟೂ 309 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button