Follow Us On

WhatsApp Group
Important
Trending

ಬಾರ್‌ಗಳೇ ಈತನ ಟಾರ್ಗೆಟ್: ಹತ್ತಾರು ಬಾರ್ ಗಳಿಗೆ ಕನ್ನಹಾಕಿ ನಗದುದೋಚಿದ್ದ ಅಂತರಾಜ್ಯ ಕಳ್ಳನ ಬಂಧನ


ಮುoಡಗೋಡ: ಮೂರು ತಿಂಗಳ ಹಿಂದೆ ವೈನ್ ಶಾಪ್ ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತರಾಜ್ಯ ಕಳ್ಳನನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ನಾಸೀರ್ ಮದ್ದಳ್ಳಿ (33) ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಆಗಸ್ಟ್ 19ರಂದು ಪಟ್ಟಣದ ವೈನ್ ಶಾಪ್ ಒಂದರ ಮೇಲ್ಛಾವಣಿ ಶೀಟ್ ತೆಗೆದು ಅಂಗಡಿಯಲ್ಲಿದ್ದ ಹಣ್ಣನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ಆರೋಪಿಯಿಂದ ಸುಮಾರು 37 ಸಾವಿರ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಅಣ್ಣಿಗೇರಿ, ಕೊಲ್ಲೂರು, ಬ್ಯಾಡಗಿ, ಗದಗ, ಕೊಪ್ಪಳ, ಯರಗಟ್ಟಿ, ಘಟಪ್ರಭಾ, ಹುಬ್ಬಳ್ಳಿ, ಸವದತ್ತಿ, ಸಾಗರ, ಹರಪನಹಳ್ಳಿ, ಹಿರೇಕೇರೂರ, ಯಾದಗಿರಿ ಸೇರಿ ಹಲವು ಬಾರ್‌ಗಳನ್ನು ಕಳ್ಳತನ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button