Important
Trending

ಮೊಬೈಲ್, ಪೋಟೊ ಶಾಪ್ ದೋಚಿದ ಕಳ್ಳರು: ಸಿಸಿ ಟಿವಿಯಲ್ಲಿ ಸೆರೆಯಾದ ಕಳ್ಳರ ಕೈಚಳಕ

ಕಾರವಾರ: ಹಂಚು ಹಾಗೂ ತಗಡು ತೆಗೆದು ಮೊಬೈಲ್ ಶಾಪ್ ಹಾಗೂ ಪೋಟೊ ಸ್ಟುಡಿಯೋಗೆ ಬೆಲೆಬಾಳುವ ಮೊಬೈಲ್, ಕ್ಯಾಮಾರಗಳನ್ನು ಹೊತ್ತೊಯ್ದಿರುವ ಘಟನೆ ಮುಂಡಗೋಡ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರುವ ಶ್ರೀ ಮೊಬೈಲ್ ಸೇಲ್ಸ್ & ಸರ್ವಿಸ್ ಹಾಗೂ ಶ್ರೀ ಶಕ್ತಿ ಪೋಟೊ ಸ್ಟುಡಿಯೋ ಗೆ ತಡರಾತ್ರಿ ಮೆಲ್ಚಾವಣಿಯ ಹಂಚು ಹಾಗೂ ತಗಡು ತೆಗೆದು ನುಗ್ಗಿದ್ದ ಖದೀಮರು ಅಂಗಡಿಯಲ್ಲಿದ್ದ ಬೆಲೆಬಾಳುವ ಮೊಬೈಲ್ ಹಾಗೂ ಕ್ಯಾಮಾರಾ ಸೇರಿದಂತೆ ಹಲವು ವಸ್ತುಗಳನ್ನು ಹೊತ್ತೊಯ್ದಿದ್ದಾರೆ.

ಆದರೆ ಮೊಬೈಲ್ ಶಾಪ್ ನಲ್ಲಿ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದಷ್ಟೇ ಇಲ್ಲಿನ ವೈನ್ ಶಾಪ್ ಗೆ ಕನ್ನ ಹಾಕಿದ್ದ ಖದೀಮರು, ಇದೀಗ ಮತ್ತೆರಡು ಅಂಗಡಿ ದೋಚಿದ್ದಾರೆ.

ಪಟ್ಟಣದಲ್ಲಿ ಕಳೆದ ಎರಡು ವಾರದಲ್ಲಿ ಇದು ಎರಡನೇ ಘಟನೆಯಾಗಿದ್ದು ಸರಣಿ ಕಳ್ಳತದಿಂದ ಜನ ಕೂಡ ಭಯಭೀತರಾಗಿದ್ದಾರೆ. ಘಟನೆ ಬಳಿಕ ಪೊಲೀಸರು ಅಂಗಡಿಗಳಲ್ಲಿ ಪರಿಶೀಲನೆ ನಡೆಸಿದ್ದು, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಸ್ಮಯ ನ್ಯೂಸ್ ಕಾರವಾರ

Back to top button