Follow Us On

WhatsApp Group
Big News
Trending

cctv footage: ಆಯಿಲ್ ತೆಗೆದುಕೊಳ್ಳಲು ಬಂದವನು ಮಾಡಿದ ಕೆಲಸ ನೋಡಿ: ಕೌಂಟರ್ ಗೆ ಕೈಹಾಕಿ ಹಣ ಎಗರಿಸಿದ!

ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಕ್ಯಾಶ್ ಕೌಂಟರ್ನಿಂದ ಹೊರಗಡೆ ತೆರಳಿದ್ದ ವೇಳೆ, ಈ ಖತನಾಕ್ ಖದೀಮ ಕ್ಯಾಶ್ ಕೌಂಟರ್ನಿಂದ ಹಣ ಕದ್ದು, ಹೊರಗಡೆ ಕಾಯುತ್ತಿದ್ದ ಇನ್ನೋರ್ವನ ಬೈಕ್ ಏರಿ ಇಬ್ಬರು ಪರಾರಿಯಾಗಿದ್ದಾರೆ.

ಕುಮಟಾ: ದುಷ್ಕರ್ಮಿಗಳು ಇತ್ತಿಚೆಗೆ ನೂರಾರು ರೀತಿಯ ವಂಚನೆಯ ದಾರಿಯನ್ನು ಕಂಡುಕೊಂಡಿದ್ದು, ಹಣವನ್ನು ದೋಚುತ್ತಿರುವ ಸುದ್ದಿ ಹಲವೆಡೆ ವರದಿಯಾಗುತ್ತಲೇ ಇದೆ. ಅದರಲ್ಲೂ ದೇವಸ್ಥಾನ, ಅಂಗಡಿ, ಮೊಬೈಲ್ ಶೂರೂಮ್‌ಗಳಲ್ಲಿ ಯಾಮಾರಿಸಿ, ಅಲ್ಲಿನವರ ಗಮನವನ್ನು ಬೇರೆಡೆ ಸೆಳೆದು, ಹಣವನ್ನು ವಂಚಿಸುತ್ತಿರುವ ಪ್ರಕರಣ ಹೆಚ್ಚಿದೆ. ಹೌದು, ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಕ್ಯಾಶ್ ಕೌಂಟರ್ನಿಂದ ಹೊರಗಡೆ ತೆರಳಿದ್ದ ವೇಳೆ, ಈ ಖತನಾಕ್ ಖದೀಮ ಕ್ಯಾಶ್ ಕೌಂಟರ್ನಿಂದ ಹಣ ಕದ್ದು, ಹೊರಗಡೆ ಕಾಯುತ್ತಿದ್ದ ಇನ್ನೋರ್ವನ ಬೈಕ್ ಏರಿ ಇಬ್ಬರು ಪರಾರಿಯಾಗಿದ್ದಾರೆ. ಈ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೌದು,.ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಕುಮಟಾ ಪಟ್ಟಣದ ಮೂರೂರ್ ಕ್ರಾಸ್ ಸಮೀಪವಿರುವ ಪೆಟ್ರೋಲ್ ಬಂಕ್‌ಗೆ ಆಯಿಲ್ ಖರೀದಿಯ ನೆಪದಲ್ಲಿ ಬಂದ ಕಳ್ಳರು ಕ್ಯಾಶ್ ಕೌಂಟರ್‌ನಲ್ಲಿದ್ದ 1 ಲಕ್ಷಕ್ಕೂ ಅಧಿಕ ನಗದನ್ನು ಎಗರಿಸಿ ಪರಾರಿಯಾಗಿದ್ದಾರೆ. ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರಲ್ಲಿ ಓರ್ವನು ಆಯಿಲ್ ಖರೀದಿಯ ನೆಪದಲ್ಲಿ ಕ್ಯಾಶ್ ಕೌಂಟರ್‌ಗೆ ತೆರಳಿದ್ದಾನೆ.

ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್‌ಗಾಗಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ಕ್ಯಾಶ್ ಕೌಂಟರ್ನಿಂದ ಕೆಲ ಸಮಯಗಳ ಕಾಲ ಹೊರಗಡೆ ತೆರಳಿದ್ದರು. ಇದೇ ಸರಿಯಾದ ಸಮಯ ಎಂದುಕೊoಡ ಕದೀಮ ಕ್ಯಾಶ್ ಕೌಂಟರ್ನಿಂದ ಹಣ ಕದ್ದು, ಹೊರಗಡೆ ಕಾಯುತ್ತಿದ್ದ ಇನ್ನೋರ್ವನ ಬೈಕ್ ಏರಿ ಇಬ್ಬರು ಪರಾರಿಯಾಗಿದ್ದಾರೆ.

ಕ್ಯಾಶ್ ಕೌಂಟರ್‌ಗೆ ಬಂದ ಸಿಬ್ಬಂದಿ ಕ್ಯಾಶ್ ಬಾಕ್ಸ್ ನೋಡುವಷ್ಟರಲ್ಲಿ ಬಾಕ್ಸ್ನಲ್ಲಿದ್ದ ನಗದು ಮಾಯವಾಗಿತ್ತು. ಈ ವಿಷಯವನ್ನು ಸಿಬ್ಬಂದಿಗಳು ತಕ್ಷಣವೇ ಬಂಕ್ ಮಾಲಿಕರಿಗೆ ತಿಳಿಸಿ, ಬಂಕ್ ಮಾಲೀಕರು ಕುಮಟಾ ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ಶಿಘ್ರವೇ ಸ್ಥಳಕ್ಕಾಗಮಿಸಿದ ಕುಮಟಾ ಕ್ರೈಂ ಪಿ.ಎಸ್.ಐ ಸುಧಾ ಅಘನಾಶಿನಿ ಅವರ ತಂಡ ಪರಿಶೀಲನೆ ನಡೆಸಿದ್ದಾರೆ.

ನಂತರ ಬಂಕ್‌ಗೆ ಅಳವಡಿಸಲಾಗಿದ್ದ ಸಿ.ಸಿ ಕ್ಯಾಮೆರಾ ಫೂಟೇಜ್ ಗಮನಿಸಿದಾಗ ನಗದು ಎಗರಿಸಲು ಕಿಡಿಗೇಡಿಗಳು ತಮ್ಮ ಕೈಚಳಕ ತೋರಿಸಿರುವ ದೃಶ್ಯಾವಳಿ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವುದು ಕಂಡುಬಂದಿದೆ. ಈ ಘಟನೆಯ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಕಳ್ಳತನದ ದೃಶ್ಯಾವಳಿಗಳನ್ನು ಪಡೆದುಕೊಂಡ ಪೊಲೀಸರು ಕಳ್ಳರ ಹುಡುಕುವಿಕೆಗಾಗಿ ಬಲೆ ಬೀಸಿದ್ದಾರೆ.

ಶ್ರೀ ಕಟೀಲು ದುರ್ಗಾಪರಮೇಶ್ವರಿ  ಜ್ಯೋತಿಷ್ಯ ಪೀಠ “ಪ್ರಧಾನ ತಾಂತ್ರಿಕ್ : ಶ್ರೀ ವಾಸುದೇವನ್  ಮೊಬೈಲ್ : 9964108888,,,, INDIAN FAMOUS ASTROLOGER, ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9964108888

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ ಕುಮಟಾ

Back to top button