Focus NewsImportant
Trending
ಮಗುವಿನ ಮೇಲೆ ನಾಯಿ ದಾಳಿ: ಮನೆ ಪ್ರವೇಶಿಸುತ್ತಿರುವಾಗ ಏಕಾಏಕಿ ಎರಗಿದ ಶ್ವಾನ: ಇನ್ನೂ ಇಬ್ಬರ ಮೇಲೆ ದಾಳಿ
ಭಟ್ಕಳ: ಒಂದೂವರೆ ವರ್ಷದ ಮಗುವಿನ ಮೇಲೆ ನಾಯಿ ದಾಳಿ ನಡೆಸಿತ್ತು. ಅದಾದ ಬಳಿಕ ಇನ್ನೂ ಇಬ್ಬರ ಮೇಲೆ ನಾಯಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
- ಮನೆಗೆ ಅಪ್ಪಳಿಸಿದ ಸಿಡಿಲು: ಮನೆ ಹೇಗಾಗಿದೆ ನೋಡಿ?
- ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು
- ಬೈಕ್ ಗಳ ನಡುವೆ ಡಿಕ್ಕಿ: ಸವಾರ ಗಂಭೀರ : ಡಿಕ್ಕಿ ಪಡಿಸಿದ ಇನ್ನೋರ್ವ ಪರಾರಿ
ತಕಿಯಾ ಸ್ಟ್ರೀಟ್ನ ಇಮ್ರಾನ್ ಖುಶಾಲ್ ತನ್ನ ಕುಟುಂಬದೊಂದಿಗೆ ನವಾಯತ್ ಕಾಲೋನಿ ಮದುವೆ ಮಂಟಪದಲ್ಲಿ ರಾತ್ರಿ ಸುಮಾರು ಎಂಟು ಘಂಟೆಗೆ ಆಟೋರಿಕ್ಷಾದಿಂದ ಇಳಿದು ಪ್ರವೇಶಿಸುತ್ತಿದ್ದಾಗ ನಾಯಿಯೊಂದು ದಾಳಿ ಮಾಡಿದೆ. ನಾಲ್ಕು ವರ್ಷದ ಮಗ ಬಿಲಾಲ್ ಮೇಲೆ ದಾಳಿ ಮಾಡಿದ್ದು, ಬಾಲಕನ ಮುಖಕ್ಕೆ ಗಾಯಗಳಾಗಿವೆ.
ನಾಯಿಯ ಹಿಡಿತದಿಂದ ಮಗುವನ್ನು ರಕ್ಷಿಸುವ ಯತ್ನದಲ್ಲಿ ಯುವಕ ಅಸೀಮ್ನ ಮೇಲೂ ನಾಯಿ ದಾಳಿ ಮಾಡಿದ್ದು, ಅಸೀಮ್ಗೂ ನಾಯಿ ಕಚ್ಚಿದೆ ಎಂದು ವರದಿಯಾಗಿದೆ. ಇಬ್ಬರಿಗೂ ಹತ್ತಿರದ ಆಸ್ಪತ್ರೆಯಿಂದ ಅಗತ್ಯ ಚುಚ್ಚುಮದ್ದು ನೀಡಲಾಗಿದೆ.
ವಿಸ್ಮಯ ನ್ಯೂಸ್ , ಉದಯ್ ಎಸ್ ನಾಯ್ಕ ಭಟ್ಕಳ