Important
Trending

ಪ್ರಯಾಣಿಕರ ಜೀವ ಉಳಿಸಿದ ಚಾಲಕ

ಸಿದ್ದಾಪುರ: ತಾಂತ್ರಿಕ ದೋಷದಿಂದ ಸಾರಿಗೆ ಬಸ್ಸೊಂದು ಚಾಲಕನ ಬಲಭಾಗದ ರಸ್ತೆ ಅಂಚಿನ ತುದಿಗೆ ತಲುಪಿ, ಪ್ರಯಾಣಿಕರು ಆತಂಕಗೊoಡಿದ್ದರು. ಆದರೆ, ಸ್ವಲ್ಪದರಲ್ಲೇ ಭಾರಿ ಅನಾಹುತ ತಪ್ಪಿದ ಘಟನೆ ಸಿದ್ದಾಪುರ ಕುಮಟಾ ರಸ್ತೆಯ ಬಡಾಳ ಘಾಟ್ ನಲ್ಲಿ ನಡೆದಿದೆ.
ಸಿದ್ದಾಪುರದಿಂದ ಕಾರವಾರಕ್ಕೆ ಹೋಗುವ ಬೆಳಗಿನ ಬಸ್ ಎಂದಿನoತೆ ಪ್ರಯಾಣಿಕರನ್ನು ತುಂಬಿಕೊoಡು ಹೋಗುತ್ತಿರುವಾಗ ರಸ್ತೆಯ ತಿರುವಿನಲ್ಲಿ ಈ ಘಟನೆ ನಡೆದಿದೆ.

ಚಾಲಕನ ಸಮಯಪ್ರಜ್ಞೆಯಿಂದಾಗಿ ಪಲ್ಟಿಯಾಗುವ ಹಂತಕ್ಕೆ ತಲುಪಿದ್ದ ಬಸ್ ನಲ್ಲಿದ್ದ ಪ್ರಯಾಣೀಕರು ಸುರಕ್ಷಿತವಾಗಿದ್ದಾರೆ. ಜೆಸಿಬಿ ಮೂಲಕ ಬಸ್ಸನ್ನ ಎತ್ತಿ ರಸ್ತೆಯಲ್ಲಿ ಉಳಿದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ವಿಸ್ಮಯ ನ್ಯೂಸ್, ಸಿದ್ದಾಪುರ

Back to top button