Important
Trending

ಸ್ವಚ್ಛತೆ ನೋಡಿಕೊಳ್ಳುತ್ತಿದ್ದ ಮಹಿಳೆ ಕೋಟಿತೀರ್ಥದಲ್ಲಿ ಮುಳುಗಿ ಸಾವು

ಕಳೆದ 25 ವರ್ಷದಿಂದ ಕೋಟಿತೀರ್ಥದಲ್ಲೇ ಸೇವೆ

ಗೋಕರ್ಣ : ಇಲ್ಲಿನ ಪ್ರವಿತ್ರ ಕೋಟಿತೀರ್ಥದಲ್ಲಿ ಮುಳುಗಿ ಮಹಿಳೆಯೊಬ್ಬಳು ಮೃತಪಟ್ಟ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಧಾ ಅನಂತ ಅಡ್ವೇಕರ್ ಎಂದು ಗುರುತಿಸಲಾಗಿದೆ. ಈಕೆ ಹೇಗೆ ನೀರಿನಲ್ಲಿ ಮುಳುಗಿದಳು ಎಂಬ ಬಗ್ಗೆ ಮಾಹಿತಿ ಸಿಗಬೇಕಿದೆ.

ಗೋಕರ್ಣ ರಥಬೀದಿಯಲ್ಲಿ ಸಂಚರಿಸಬೇಕು ಅಂದರೆ ಅರೆಬರೆ ಬಟ್ಟೆ ಧರಿಸುವಂತಿಲ್ಲ! ಹೊಸ ವಸ್ತ್ರಸಂಹಿತೆ

ಈಕೆ ಕಳೆದ ಸುಮಾರು 20 ರಿಂದ 25 ವರ್ಷದಿಂದ ದಿನ ಬೆಳಗಿಂದ ಸಾಯಂಕಾಲದ ತನಕ ಕೋಟಿತೀರ್ಥ ಸುತ್ತುತ್ತ ಇರುತ್ತಿದ್ದಳು. ಕೋಟಿತೀರ್ಥ ಸ್ವಚ್ಚತೆಗೆ ಪ್ರಾಮಾಣಿಕ ಕಾಳಜಿವಹಿಸಿ ಸ್ನಾನ ಮಾಡುವವರು, ಬಟ್ಟೆ ತೊಳೆವವರು, ಸೋಪು ಬಳಸದಂತೆ ನೋಡಿಕೊಂಡು ನೀರು ಅತೀ ಹಾಳಾಗದಂತೆ ನೋಡಿಕೊಂಡವರಲ್ಲಿ ಮುಂಚೂಣಿಯಲ್ಲಿದ್ದಳು.

ಸ್ವಚ್ಚತೆ ನೋಡಿಕೊಂಡು ಅಪರಕರ್ಮ ಮಾಡಿಸಿದವರ ಬಳಿ ಪಾವತಿ ನೀಡಿ ನಿಗದಿತ ಹಣ ತೆಗೆದುಕೊಂಡು , ಯಾತ್ರಿಕರಿಗೆ ಜಾಗ್ರತಿ ಮೂಡಿಸಿತ್ತ ಅತ್ಯುತ್ತಮ ಸೇವೆ ನೀಡಿ, ಹೆಸರುಗಳಿಸಿದ್ದರು. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ.

ವಿಸ್ಮಯ ನ್ಯೂಸ್ ಗೋಕರ್ಣ

Related Articles

Back to top button