Focus News
Trending

ಬಿಜೆಪಿ ಸಿದ್ದಾಪುರ ಮಂಡಲದ ನೂತನ ಅಧ್ಯಕ್ಷರನ್ನಾಗಿ ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ನೇಮಕ

ಸಿದ್ದಾಪುರ: ಭಾರತೀಯ ಜನತಾ ಪಕ್ಷದ ಸಿದ್ದಾಪುರ ಮಂಡಲದ ನೂತನ ಅಧ್ಯಕ್ಷರನ್ನಾಗಿ ಪಟ್ಟಣ ಪಂಚಾಯತ ಸದಸ್ಯ ಮಾರುತಿ ನಾಯ್ಕ ಹೊಸೂರ ಅವರನ್ನು ನೇಮಕ ಮಾಡಲಾಗಿದೆ. ಕಳೆದ ಮೂರು ವರ್ಷಗಳಿಂದ ತಾಲೂಕಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ ನಾಯ್ಕ ಬೇಡ್ಕಣಿ ಇವರನ್ನು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಿಸಿ ಅವರ ಸ್ಥಾನಕ್ಕೆ ಮಾರುತಿ ನಾಯ್ಕ ಅವರನ್ನು ನೇಮಕ ಮಾಡಲಾಗಿದೆ.

ಗೋಕರ್ಣ ರಥಬೀದಿಯಲ್ಲಿ ಸಂಚರಿಸಬೇಕು ಅಂದರೆ ಅರೆಬರೆ ಬಟ್ಟೆ ಧರಿಸುವಂತಿಲ್ಲ! ಹೊಸ ವಸ್ತ್ರಸಂಹಿತೆ

ಜಿಲ್ಲಾ ಕಾರ್ಯದರ್ಶಿಯಾಗಿದ್ದ ಗುರುರಾಜ ಶಾನಭಾಗ ಅವರನ್ನು ವಿಶೇಷ ಆಮಂತ್ರಿತರಾಗಿ ನೇಮಿಸಲಾಗಿದೆ.
ಮಾರುತಿ ನಾಯ್ಕ ಸಿದ್ದಾಪುರ ಪಟ್ಟಣ ಪಂಚಾಯತಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ‌. ಪಪಂನ ಹಾಲಿ ಸದಸ್ಯರಾಗಿರುವ ಇವರು ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ, ಎಪಿಎಂಸಿ ನಾಮನಿರ್ದೇಶಿತ ಸದಸ್ಯರಾಗಿ, ಜಿಲ್ಲಾ ಸದಸ್ಯರಾಗಿ ಹಾಗೂ ಕೆ.ಜಿ.ನಾಯ್ಕ ಹಣಜಿಬೈಲ್ ಅವರ ಜಿಲ್ಲಾ ಅಧ್ಯಕ್ಷತೆಯ ಅವಧಿಯಲ್ಲಿ ವಿಶೇಷ ಆಮಂತ್ರಿತರಾಗಿ ಕಾರ್ಯನಿರ್ವಹಿಸಿದ್ದರು.

hitendra naik

ವಿಸ್ಮಯ ನ್ಯೂಸ್ ದಿವಾಕರ ಸಂಪಖಂಡ ಸಿದ್ದಾಪುರ

Related Articles

Back to top button