Follow Us On

WhatsApp Group
Important
Trending

ಪತಿ ನಾಪತ್ತೆ, ಪತ್ನಿಯಿಂದ ದೂರು ದಾಖಲು: ಪೊಲೀಸ್ ಪ್ರಕಟಣೆಯಲ್ಲಿ ಏನಿದೆ?

ಅಂಕೋಲಾ : ಮನೆಯಿಂದ ಹೊರ ಹೋಗಿ ನಾಪತ್ತೆಯಾಗಿರುವ ತನ್ನ ಪತಿಯನ್ನು ಹುಡುಕಿ ಕೊಡುವಂತೆ, ಪತ್ನಿಯು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ತಾಲೂಕಿನ ವಂದಿಗೆ ಹಡನುಮಟ್ಟಾದ ನಿವಾಸಿ ಕಿರಣ ಫಕೀರಪ್ಪ ಮಹಾಲೆ (56) ಈತನೇ ಕಾಣೆಯಾಗಿರುವ ವ್ಯಕ್ತಿಯಾಗಿದ್ದಾನೆ. ಅಂಕೋಲಾ ಪಟ್ಟಣದಲ್ಲಿ ಕಟಿಂಗ್ ಶಾಪ್ ನಡೆಸುತ್ತಿದ್ದ ಈತ 29 ಜುಲೈ 2024 ರಂದು ಬೆಳಿಗ್ಗೆ ಕಟಿಂಗ್ ಶಾಪಿಗೆ ಹೋಗುವದಾಗಿ ಹನುಮಟ್ಟಾದ ತನ್ನ ಮನೆಯಿಂದ ಹೊರಟಿದ್ದು ಈವರೆಗೂ ಮನೆಗೆ ವಾಪಸಾಗದೆ, ತನ್ನ ಇರುವಿಕೆ ಬಗ್ಗೆ ಯಾವುದೆ ಮಾಹಿತಿಯನ್ನು ನೀಡದೇ, ಎಲ್ಲೋ ಹೋಗಿ ಕಾಣೆಯಾಗಿದ್ದಾರೆ ಎಂದು ನೊಂದ ಪತ್ನಿ ಚಂದ್ರಕಲಾ ಕಿರಣ ಮಹಾಲೆ ಅಂಕೋಲಾ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕಾಣೆಯಾಗಿರುವ ಕಿರಣ ಮಹಾಲೆ 5 ಫೂಟ್ 4 ಇಂಚು ಎತ್ತರ, ಸಾದಾ ಕಪ್ಪು ಮೈಬಣ್ಣ, ಗೋಲು ಮುಖ, ತೆಳ್ಳಗಿನ ಮೈಕಟ್ಟು, ಕುರುಚಲು ಗಡ್ಡ ಇದ್ದು ಕನ್ನಡ ಭಾಷೆ ಮಾತನಾಡುತ್ತಾನೆ. ಕಾಣೆಯಾದ ದಿನ ಕಪ್ಪು ಡಿಸೈನ್ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದನು. ಈ ಮೇಲಿನ ಚಹರೆಯುಳ್ಳ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಅಂಕೋಲಾ ಪೊಲೀಸ್ ಠಾಣೆ, ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅಥವಾ ಅಂಕೋಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08388-230333 ಅಥವಾ ಮೊ.ನಂ. 9480805250/9480805268 ಗೆ ಸಂಪರ್ಕಿಸಬಹುದೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇ ವ್ಯಕ್ತಿ ಈ ಹಿಂದೆಯೂ ತನ್ನ ಹೆಂಡತಿಯನ್ನು ಇಲ್ಲೇ ಬಿಟ್ಟು ಹೋಗಿ ಹುಬ್ಬಳ್ಳಿ, ಗದಗ, ಮಂಗಳೂರು ಮತ್ತಿತರಡೆ ಕೆಲದಿನಗಳ ಮಟ್ಟಿಗೆ ಹೋಗಿ ವಾಸಿಸುತ್ತಿದ್ದ ಎಂದು ಸ್ಥಳೀಯ ಕೆಲವರು ಮಾತನಾಡಿಕೊಂಡಂತಿದ್ದು,ಪೊಲೀಸ್ ತನಿಕೆಯಿಂದ ಆತನ ಇರುವಿಕೆ ಬಗ್ಗೆ ತಿಳಿದು ಬರಬೇಕಿದೆ .

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button