Important
Trending

ಭಟ್ಕಳದಲ್ಲಿ ನಡೆದ ಪತಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಪಾಕಿಸ್ತಾನ‌ ಮಹಿಳೆ

ಭಟ್ಕಳ: ಅಕ್ರಮವಾಗಿ ಕಳ್ಳದಾರಿಯ ಪಾಕಿಸ್ತಾನದಿಂದ ಭಟ್ಕಳದಲ್ಲಿ ಇರುವ ಗಂಡನ ಮನೆ ಸೇರಿಕೊಂಡು, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಪಾಕಿಸ್ತಾನಿ ಕರಾಚಿ ಮೂಲದ ಖತೀಜಾ ಮೆಹರೀನ್ ರುಕ್ಕುದ್ದೀನ್, ಕೋರ್ಟ್ ಅನುಮತಿಯ ಮೇರೆಗೆ ಪತಿಯ ಅಂತಿಮ ಕಾರ್ಯದಲ್ಲಿ ಪಾಲ್ಗೊಂಡಿದ್ದಳು.

ಹೌದು, ಖತೀಜಾ‌ ಪತಿ, ನವಾಯತ್ ಕಾಲೋನಿಯ ನಿವಾಸಿ ಜಾವೇದ್ (47) ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದರು. ಪತಿಯ ಅಂತ್ಯಸಂಸ್ಕಾರ ಮತ್ತು ಮಕ್ಕಳೊಂದಿಗೆ ಕಾಲ ಕಳೆಯಲು ಖತೀಜಾ ಭಟ್ಕಳ ನ್ಯಾಯಾಲಯದಲ್ಲಿ 10 ದಿನಗಳ ಕಾಲಾವಕಾಶ ಕೇಳಿದ್ದಳು.

ಆದರೆ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಭಟ್ಕಳ ನ್ಯಾಯಾಲಯ ಶುಕ್ರವಾರ ಸಂಜೆ 6 ಗಂಟೆಯಿಂದ ಶನಿವಾರ ಸಂಜೆ 6 ಗಂಟೆ ಅವಧಿಯವರೆಗೆ 1 ದಿನದ ಅನುಮತಿ ಮಾತ್ರ ನೀಡಿತ್ತು.

ವಿಸ್ಮಯ ನ್ಯೂಸ್ ಕಾರವಾರ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button