Follow Us On

WhatsApp Group
Big News
Trending

ಬ್ರಿಟಿಷರ ಕಾಲದಲ್ಲಿ ಕೇವಲ ನಾಲ್ಕುಸಾವಿರ ರೂಪಾಯಿ ವೆಚ್ಚದಲ್ಲಿ ನಿರ್ಮಾಣ: ಈಗ ಶಿಥಿಲಾವಸ್ಥೆಗೆ ತಲುಪಿದೆ ಈ ಮ್ಯಾಕೆನ್ಜಿ ಬ್ರಿಡ್ಜ್

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಕುಮಟಾ ತಾಲೂಕಿನ ವನ್ನಳ್ಳಿ ಕಡಲ ತೀರವು ಸಹ ಒಂದಾಗಿದೆ. ದಿನ ನಿತ್ಯ ನೂರಾರು ಪ್ರವಾಸಿಗರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರ ಒಡಾಟವನ್ನು ಹೊಂದಿರುವ ಸ್ಥಳ ಇದಾಗಿದ್ದು, ಈ ಕಡಲ ತೀರಕ್ಕೆ ಸಾಗುವಾಗ ಸಿಗುವ ಬ್ರೀಟಿಷ್ ಕಾಲದ ಬ್ರಿಡ್ಜ್ ಒಂದು ಶಿಥಿಲಾವಸ್ಥೆಯಲ್ಲಿರುವುದ ಬಹಳ ಬೆಸರದ ಸಂಗತಿಯಾಗಿದೆ.

ಬ್ರಿಟಿಷರ ಕಾಲದಲ್ಲಿ ಕೇವಲ ನಾಲ್ಕುಸಾವಿರ ರೂಪಾಯಿಯಲ್ಲಿ ನಿರ್ಮಾಣವಾದ ಈ ಮ್ಯಾಕೆನ್ಜಿ ಬ್ರಿಡ್ಜ್ ಗೆ 250 ವರ್ಷಗಳ ಇತಿಹಾಸ ಹೊಂದಿದೆ. ಆದರೆ, ಇದೀಗ ಈ ಬ್ರಿಡ್ಜ್ ಸಂಪೂರ್ಣ ಶಿಥಿಲಾವಸ್ಥೆಗೆ ಬಂದು ತಲುಪಿದೆ. 1879 ರ ಬ್ರೀಟಿಷ್ ಆಡಳಿದ ವೇಳೆ ನಿರ್ಮಾಣವಾದಂತಹ ಬ್ರಿಡ್ಜ್ ಇದಾಗಿದ್ದು, ಆಗಿನ ಕಾಲದಲ್ಲಿ ಸರಕು ಸಾಮಾನುಗಳ ಸಾಗಾಟಕ್ಕಾಗಿ ಈ ಬ್ರಿಡ್ಜ್ ಅನ್ನು ನಿರ್ಮಾಸಲಾಗಿತ್ತು ಎನ್ನಲಾಗಿದೆ.

1879 ರ ಡಿಸೆಂಬರ್‍ನಲ್ಲಿ ಪ್ರಾರಂಭವಾದ ಈ ಬ್ರಿಡ್ಜ್ ನಿರ್ಮಾಣದ ಕಾಮಗಾರಿ 1880 ರ ಮೇ ತಿಂಗಳಿನಲ್ಲಿ ಮುಕ್ತಾಯ ಗೊಂಂಡಿದ್ದು, 4400 ರೂ ಮೊತ್ತದಲ್ಲಿ ಈ ಬ್ರಿಡ್ಜ್ ನಿರ್ಮಾಣ ವಾಗಿದೆ ಎಂಬುದಾದ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ.

ಆದರೆ, ಅನೇಕ ವರ್ಷಗಳ ಇತಿಹಾಸ ಹೊಂದಿರುವ ಈ ಬ್ರಿಡ್ಜ್ ಮೇಲೆ ಸಾರ್ವಜನಿಕರು ಇಂದು ತಮ್ಮ ಜೀವವನ್ನು ಕೈಯಲ್ಲಿಟ್ಟುಕೊಂಡು ಸಾಗುವ ಸ್ಥಿತಿ ನಿರ್ಮಾಣವಾಗಿದೆ. ಈ ಒಂದು ಬ್ರಿಡ್ಜ್ ಬಹಳ ಕಿರಿದಾಗಿದ್ದು ಬಸ್, ಲಾರಿ ಮುಂತಾದ ದೊಡ್ಡ ವಾಹನಗಳು ಸಂಚರಿಸುವಾಗ ಇನ್ಯಾವ ವಾಹನವು ಸಹ ಒಡಾಡಲು ಸ್ಥಳಾವಕಾಶ ಇಲ್ಲವಾಗಿದೆ. ಪಾದಾಚಾರಿಗಳು ಸಹ ಬಹಳ ಜಾಗೂರಕತೆಯಿಂದ ಸಂಚರಿಸಬೇಕಿದ್ದು ಬ್ರಿಡ್ಜ್‍ನ ಎರಡೂ ಕಡೆ ಹಾಕಲಾದ ಸುರಕ್ಷತಾ ಕಂಬಗಳು ಮುರಿದು ಹೋಗಿದೆ. ದೊಡ್ಡವಾಹನಗಳು ಒಡಾಡಿದರೆ ಬ್ರಿಡ್ಜ್ ಅಲುಗಾಡುವ ಸ್ಥಿತಿಗೆ ಬಂದು ತಲುಪಿದೆ.

ಈ ಸಂಬಂಧ ಮಾಜಿ ಪುರಸಭಾ ಸದಸ್ಯರಾದ ಮಂಜುನಾಥ ಜೈನ್ ಅವರು ನಮ್ಮ ವಿಸ್ಮಯ ಟ.ವಿ ಯೊಂದಿಗೆ ಮಾತನಾಡಿ, ಸ್ಥಳೀಯ ಶಾಸಕರು ಕುಮಟಾ ತಾಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಈಗಾಗಲೇ ತಂದಿರುವುದು ಬಹಳ ಸಂತೋಷದ ವಿಷಯ. ಆದರೆ ಈ ಒಂದು ಬ್ರಿಡ್ಜ್ ಮಾತ್ರ ಇನ್ನೂ ಸಹ ಶಿಥಿಲಾವಸ್ಥೆಯಲ್ಲಿಯೇ ಇದೆ. ಇದೇ ಭಾಗದಲ್ಲಿ ಅನೇಕ ಬಾರಿ ಒಡಾಡಿರುವ ಶಾಸಕರು ಒಂದು ಬಾರಿ ಬ್ರಿಡ್ಜ್‍ನ ಸ್ಥಿತಿ ಗತಿಗಳನ್ನು ಗಮನಿಸಿ ಒಂದು ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಆಗ್ರಹಿಸಿದರು.

ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

Back to top button