Big News
Trending

ಮೀನುಮಾರುಕಟ್ಟೆಯಲ್ಲಿ ಮೀನುಕದ್ದು ಮನೆಮನೆಗೆ ತೆರಳಿ ಮಾರುತ್ತಿದ್ದರು! ಸೈಕಲ್, ಗೂಡಂಗಡಿಗೂ ಕನ್ನ : ಇಬ್ಬರು ಅಪ್ರಾಪ್ತ ಬಾಲಕರು ಅರೆಸ್ಟ್

ಇವರು ಈ ಹಿಂದೆ ನಗರದ ಮೀನುಮಾರುಕಟ್ಟೆಯಲ್ಲಿ ಮೀನುಗಳನ್ನು ಕದ್ದಿದ್ದರು. ಹೀಗೆ ಕದ್ದ ಮೀನನನ್ನು ಮನೆ ಮನೆಗೆ ಹೋಗಿ ಮಾರಾಟ ಮಾಡಿ, ಹಣಗಳಿಸಿದ್ದರು. ಈ ಹಣದಿಂದ ಆರೋಪಿಗಳು ಮೋಜು ಮಸ್ತಿ ಮಾಡುತ್ತಿದ್ದರು

ಕಾರವಾರ: ನಗರದಲ್ಲಿ ಕೆಲದಿನಗಳ ಹಿಂದೆ ಸರಣಿಗಳ್ಳತನ ನಡೆದಿದ್ದು, ಇದು ಪೊಲೀಸರಿಗೆ ಸವಾಲಾಗಿ, ಪರಿಣಮಿಸಿತ್ತು. ಮೀನುಮಾರುಕಟ್ಟೆ, ಪಿಕಳೆ ರಸ್ತೆ, ಗೀತಾಂಜಲಿ ಟಾಕೀಸ್ ,ರಸ್ತೆಗಳಲ್ಲಿರುವ ಗೂಡಂಗಡಿಗಳ ಬೀಗ ಮುರಿದು ಕಳ್ಳತನ ಮಾಡಲಾಗಿತ್ತು. ಇದೀಗ ಪೊಲೀಸರು ಕಳ್ಳತನ ಪ್ರಕರಣ ಬೇಧಿಸಿದ್ದು, ಆರೋಪಿಗಳು ಇಬ್ಬರು ಬಾಲಕರು ಎಂದು ತಿಳಿದುಬಂದಿದೆ.

ಗಸ್ತಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಬಾಲಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಓರ್ವ ಹಾವೇರಿ ಜಿಲ್ಲೆ ಹಾಗೂ ಹೊನ್ನಾವರ ತಾಲೂಕಿನವರಾಗಿದ್ದು, ಈ ಇಬ್ಬರೂ ಬಾಲಕರು 16 ವರ್ಷದವರಾಗಿದ್ದು, ಕಾರವಾರದಲ್ಲಿ ನೆಲೆಸಿದ್ದಾರೆ ಎಂದು ತಿಳಿದುಬಂದಿದೆ.

ನಸುಗತ್ತಲಿನಲ್ಲಿ ಯೋಜನೆ ರೂಪಿಸಿಕೊಂಡು ಕಳ್ಳತನಕ್ಕೆ ಇಳಿಯುತಿದ್ದ ಇವರು ಈ ಹಿಂದೆ ನಗರದ ಮೀನುಮಾರುಕಟ್ಟೆಯಲ್ಲಿ ಮೀನುಗಳನ್ನು ಕದ್ದಿದ್ದರು. ಹೀಗೆ ಕದ್ದ ಮೀನನನ್ನು ಮನೆ ಮನೆಗೆ ಹೋಗಿ ಮಾರಾಟ ಮಾಡಿ, ಹಣಗಳಿಸಿದ್ದರು. ಈ ಹಣದಿಂದ ಆರೋಪಿಗಳು ಮೋಜು ಮಸ್ತಿ ಮಾಡುತ್ತಿದ್ದರು. ಪ್ರಮುಖವಾಗಿ ಗೂಡಂಗಡಿಗಳೇ ಇವರ ಟಾರ್ಗೆಟ್ ಆಗಿತ್ತು.

ಸೈಕಲ್ ಕಳ್ಳತನದ ಸಂಬoಧ ದೂರು ದಾಖಲಾಗಿತ್ತು, ತನಿಖೆ ಆರಂಭಿಸಿದ ಪೊಲೀಸರು, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯ ಪರಿಶೀಲಿಸಿದ್ದು, ಮಾಹಿತಿ ಕಲೆಹಾಕಿದ್ದರು. ಈ ಆಧಾರದಲ್ಲಿ ಕಾರ್ಯಾಚರಣೆಗಿಳಿದ ನಗರ ಠಾಣೆ ಪಿ.ಎಸ್.ಐ ಸಂತೋಷ್ ರವರು ಸೈಕಲ್ ಏರಿ ಕಳ್ಳತನಕ್ಕೆ ಹೊರಟಿದ್ದ ಇವರನ್ನು ಗುರುತಿಸಿ ಬಂಧಿಸಿದ್ದಾರೆ.

ಬಂಧಿತರಿoದ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದು ಇಬ್ಬರನ್ನು ರಿಮ್ಯಾಂಡ್ ಹೋಮ್ ಗೆ ಕಳುಹಿಸಲಾಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888

ವಿಸ್ಮಯ ನ್ಯೂಸ್, ಕಾರವಾರ

Back to top button