Follow Us On

Google News
Important
Trending

ನಾನು ಮತ್ತು ನನ್ನ ಕುಟುಂಬ ಸೋಂಕಿನಿಂದ ಮುಕ್ತರಾಗಿದ್ದೇವೆ: ಡಾ. ಅಶೋಕ ಭಟ್ಟ ಹಳಕಾರ

ಡಾ.ಅಶೋಕ್ ಭಟ್ಟ ಅವರು ಹೇಳಿದ್ದೇನು?
ಸದ್ಯದಲ್ಲೇ ಮತ್ತೆ ಸೇವೆಗೆ ಲಭ್ಯ

[sliders_pack id=”1487″]

ಕುಮಟಾ:ಕೊರೊನಾ ಸೋಂಕಿನಿಂದ ನಾನು ಮತ್ತು ನನ್ನ ಕುಟುಂಬ ಸಂಪೂರ್ಣ ಮುಕ್ತರಾಗಿದ್ದೇವೆ ಎಂದು ಡಾ. ಅಶೋಕ ಭಟ್ಟ ಹಳಕಾರ ತಿಳಿಸಿದ್ದಾರೆ. ಹೌದು,
ಪಟ್ಟಣದಲ್ಲಿರುವ ಜನಪ್ರಿಯ ಖಾಸಗಿ ವೈದ್ಯರಲ್ಲಿ ಒಬ್ಬರಾಗಿರುವ ಡಾ.ಅಶೋಕ್ ಭಟ್ ಹಳಕಾರ್ ಅವರು, ಈಗ ಕರೊನಾದಿಂದ‌ ಸಂಪೂರ್ಣ ಗುಣಮುಖರಾಗಿದ್ದಾರೆ.
ಇತ್ತೀಚೆಗೆ ಅವರಲ್ಲಿ ಭಟ್ಕಳ ಮೂಲದ ಹಾಲಿ ಬೆಂಗಳೂರು ನಿವಾಸಿ ಮಹಿಳೆ ಚಿಕಿತ್ಸೆ ಪಡೆದಿದ್ದರು.
ಈ ಮಹಿಳೆಯ ಮೂಲಕ ಡಾ. ಹಳಕಾರ್ ಭಟ್ ಅವರಿಗೆ ನಂತರ ಅವರ ಕುಟುಂಬದ ಸದಸ್ಯರಿಗೆ ಕೊರೊನಾ ಸೋಂಕು ತಗಲಿಕೊಂಡಿದ್ದರಿಂದ ಚಿಕಿತ್ಸೆ ಗಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿ ಈಗ ಸಂಪೂರ್ಣ ಗುಣಮುಖರಾಗಿ ಮನೆಗೆ ಮರಳಿ 10 ದಿನ ವಿಶ್ರಾಂತಿ ಪಡೆಯುತ್ತಿದ್ದಾರೆ.
ಕೊರೊನಾ ಕುರಿತು ಯಾರು ಭಯಗೊಳ್ಳುವ ಅವಶ್ಯಕತೆ ಇಲ್ಲ.
ನನ್ನ ಮನೆ ಹಾಗೂ ಆಸ್ಪತ್ರೆಯಿರುವ ಸಂಪೂರ್ಣ ಸಮುಚ್ಚಯ ಸೆನೆಟೈಸ್ ಮಾಡಿಸಲಾಗಿದೆ. . ಆಗಸ್ಟ್ 5 ರಿಂದ ಸಾವ೯ಜನಿರಿಗೆ ನಾನು ವೈದ್ಯಕೀಯ ಸೇವೆ ನೀಡುವ ನನ್ನ ಕಾಯಕ ಆರಂಭಿಸಲಿದ್ದೇನೆ ಎಂದರು.

ಕೊರೊನಾ ಚಿಕಿತ್ಸೆಗಾಗಿ ನಾನು ಮತ್ತು  ನನ್ನ ಕುಟುಂಬ ಆಸ್ಪತ್ರೆ ಸೇರಿಕೊಂಡ ಸಮಯದಲ್ಲಿ  ಅನೇಕರು ನಮ್ಮ ಯೋಗಕ್ಷೇಮ ವಿಚಾರಿಸಿದ್ದಾರೆ. ಎಲ್ಲರಿಗು ನಾನು ಆಭಾರಿಯಾಗಿದ್ದೇನೆ.
-ಡಾ. ಅಶೋಕ ಭಟ್ಟ,ವೈದ್ಯರು

[sliders_pack id=”2570″]

Back to top button
Idagunji Mahaganapati Chandavar Hanuman