ಮಾಹಿತಿ
Trending

ಶೇಖರ್ ಮಾಸ್ತರ ವಿಧಿವಶ

ಅಂಕೋಲಾ: ತಾಲೂಕಿನ ಬಹುತೇಕ ಜನರಿಗೆ ಶೇಖರ ಮಾಸ್ತರೆಂದೆ ಪರಿಚಿತರಾಗಿದ್ದ ಲಕ್ಷ್ಮೇಶ್ವರ ನಿವಾಸಿ, ಶೇಖರ ದೇವಣ್ಣ ನಾಯಕ(58) ಗುರುವಾರ ಬೆಳೆಗಿನಜಾವ ವಿಧಿವಶರಾದರು.

ಕೊಡಗು ಜಿಲ್ಲೆಯಲ್ಲಿ ತಮ್ಮ ಶಿಕ್ಷಕ ವೃತ್ತಿಯನ್ನು ಆರಂಭಿಸಿದ್ದ ಶೇಖರ ನಾಯಕ, ಕುಮಟಾ ತಾಲೂಕಿನಲ್ಲಿಯೂ ಸೇವೆ ಸಲ್ಲಿಸಿದ್ದರು. ಅಂಕೋಲಾ ತಾಲೂಕಿನ ಬೆಳಂಬರ ಗ್ರಾಮಪಂಚಾಯತ ವ್ಯಾಪ್ತಿಯ ಅಂಬೇರಹಿತ್ಲದ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದಲ್ಲದೇ, ಪ್ರಸುತ್ತ ತೆಂಕಣಕೇರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಿವೃತ್ತಿ ಜೀವನಕ್ಕೆ ಹತ್ತಿರವಿದ್ದ ಇವರು ಸುಮಾರು 36 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿದ್ದರು.

ಕಳೆದ ಕೆಲ ವರ್ಷಗಳ ಹಿಂದೆ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ಮೃತರು,ಇತ್ತೀಚೆಗೆ ಮಧುಮೇಹ ಖಾಯಿಲೆಯಿಂದಲೂ ಬಳಲಿದ್ದರು. ಜೀವನದುದ್ದಕ್ಕೂ ತಮ್ಮ ಸರಳ ನಡೆ-ನುಡಿಗಳಿಂದ ಸರ್ವರ ಪ್ರೀತಿ ವಿಶ್ವಾಸ ಗಳಿಸಿದ್ದ ಶಿಕ್ಷಕ ನಾಯಕ ಇವರು ವಿದ್ಯಾರ್ಥಿಗಳ ಅಚ್ಚು-ಮೆಚ್ಚಿನ ಗುರುಗಳಾಗಿದ್ದರು ಮತ್ತು ವಿದ್ಯಾರ್ಥಿ ಪಾಲಕರಿಂದ ಗೌರವಕ್ಕೂ ಪಾತ್ರರಾಗಿದ್ದರು.

ಶಿಕ್ಷಕಿಯಾಗಿರುವ ಪತ್ನಿ ಸುಮನಾ, ಗಂಡು ಮಕ್ಕಳಾದ ಸೃಜನ, ಸ್ಮರಣ ಮತ್ತು ಅಪಾರ ಬಂಧು-ಬಳಗ ಹಾಗೂ ಸ್ನೇಹಿತರು ಮತ್ತು ವಿದ್ಯಾರ್ಥಿ ಬಳಗವನ್ನು ತೊರೆದಿರುವ ಮೃತರ ಅಂತ್ಯಸಂಸ್ಕಾರವನ್ನು, ಮೂಲ ಗ್ರಾಮವಾದ ಹಿಚ್ಕಡ್‌ದಲ್ಲಿ ನೇರವೇರಿಸಲಾಯಿತು.

[sliders_pack id=”2570″]

Back to top button