Important
Trending

ಅಂಕೋಲಾದ ನಾಲ್ಕು ಆರೋಗ್ಯ ಸಿಬ್ಬಂದಿಗಳಿಗೆ ಸೋಂಕು ದೃಢ

ಅಂಕೋಲಾ : ತಾಲೂಕಿನ ಮೂಲದ ಇಬ್ಬರು ಆರೋಗ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಬುಧವಾರ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎನ್ನುವ ಸುದ್ದಿ ಕೇಳಿಬಂದಿತ್ತಾದರೂ, ಅವರ ಜೊತೆಯೇ ಕರ್ತವ್ಯ ನಿರ್ವಹಿಸಲು ಹೋಗಿದ್ದ ಮತ್ತೀರ್ವರಲ್ಲಿಯೂ ಸೋಂಕಿನ ಲಕ್ಷಣ ದೃಢಗೊಳ್ಳುವುದರೊಂದಿಗೆ ಒಂದೇ ದಿನಕ್ಕೆ 4 ಸೋಂಕಿನ ಪ್ರಕರಣಗಳು ದಾಖಲಾದಂತಾಗಿದೆ.
ತಾಲೂಕಾ ಸರಕಾರಿ ಆಸ್ಪತ್ರೆಯ ಇಬ್ಬರು ಸ್ಟಾಫ್ ನರ್ಸ್ ಮತ್ತು ಇಬ್ಬರು ಡಿ ದರ್ಜೆ ಸಿಬ್ಬಂದಿಗಳೇ ಸೋಂಕಿತರಾಗಿದ್ದು, ಇವರೆಲ್ಲರೂ ಕುಮಟಾದ ಕೋವಿಡ್ ಕೇರ್‌ ಹಾಸ್ಪಿಟಲ್‍ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ರವಿವಾರ ಇವರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು ಎನ್ನಲಾಗಿದ್ದು ಇಂದು ಬಂದ ವರದಿ ಪಾಸಿಟಿವ್ ಆಗಿದೆ. ಇವರ ಗಂಟಲುದ್ರವ ಮಾದರಿ ಮತ್ತೆ ಸಂಗ್ರಹಿಸಿ ಮರುಪರೀಕ್ಷೆಗೆ ಕಳುಹಿಸಲಾಗಿದೆ ಎನ್ನಲಾಗಿದೆ.
ತಮ್ಮ ಮತ್ತು ತಮ್ಮ ಕುಟುಂಬದ ಆರೋಗ್ಯ ಕಾಳಜಿ ಹಂಗು ತೊರೆದು, ಜನತೆಯ ಸೇವೆಗೆ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಕೊರೊನಾ ವಾರಿಯರ್ಸ್ ಯೋಧರ ಶ್ರಮ ಮತ್ತು ಸೇವೆ ಶ್ಲಾಘಿಸಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

[sliders_pack id=”1487″]

Back to top button