ಸತತ 5ನೇ ಬಾರಿ ಶೇ 100 ಫಲಿತಾಂಶ ದಾಖಲಿಸಿದ ಕೆ.ಎಲ್. ಇ ಸಂಸ್ಥೆ : ಬಿ.ಇಡಿ.ನಲ್ಲಿ ಸಾಧನೆ ಮಾಡಿದ ಶಿಕ್ಷಣ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿಗಳು

ಅಂಕೋಲಾ: ಗುಣಮಟ್ಟದ ಶಿಕ್ಷಣ, ಮತ್ತು ಹತ್ತಾರು ವಿಧಾಯಕ ಚಟುವಟಿಕೆಗಳ ಮೂಲಕ ಹೆಸರುಗಳಿಸಿರುವ ಪಟ್ಟಣದ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ ಸತತ 5ನೇ ಬಾರಿ ಬಿ.ಇಡಿ ನಲ್ಲಿ 100% ಫಲಿತಾಂಶ ದಾಖಲಿಸಿ ತನ್ನ ಸಾಧನೆ ನಾಗಾಲೋಟ ಮುಂದುವರೆಸಿದೆ.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ 2019-20 ನೇ ಸಾಲಿನ ಬಿ.ಇಡಿ. ಪ್ರಥಮ ಹಾಗೂ ದ್ವಿತೀಯ ವರ್ಷದ ಫಲಿತಾಂಶ ಪ್ರಕಟಿಸಿದ್ದು, ಅಂಕೋಲಾದ ಕೆ.ಎಲ್. ಇ ವಿದ್ಯಾರ್ಥಿಗಳು ಗಣನೀಯ ಸಾಧನೆ ಮಾಡಿದ್ದಾರೆ.

ಬಿಇಡಿ ಪ್ರಥಮ ವರ್ಷದಲ್ಲಿ ಪೂರ್ವಿ ಹಲಗೇಕರ  96.08%(ಪ್ರಥಮ  ) ,ಕಾಂಚನ ಗುನಗಾ 95.17%( ದ್ವಿತೀಯ), ಮೇಘನಾ ಮಡಿವಾಳ 95% ( ತೃತೀಯ ) ಹಾಗು ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ತಿಲಕ್ ನಾಯ್ಕ್ 93.21% ( ಪ್ರಥಮ) ,ದೀಪ ನಾಯ್ಕ್93.17% (ದ್ವಿತೀಯ), ಪೂರ್ಣಿಮಾ ನಾಯ್ಕ್ ‘ ಮತ್ತು ತೃಪ್ತಿ ಜಿ. ತಲಾ 92.13% ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.
 
ಸತತ 5 ವರ್ಷಗಳಿಂದ ಶೇ. 100 ಫಲಿತಾಂಶ ದಾಖಲಿಸುವ ಮೂಲಕ ಸಂಸ್ಥೆ ಕೀರ್ತಿ ಹೆಚ್ಚಿಸಿದ , ಪ್ರಾಚಾರ್ಯರು, ಭೋದಕ – ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಸಾಧನೆಗೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಯಾನಂದ ಮುನವಳ್ಳಿ , ಕಾರ್ಯದರ್ಶಿ ಡಾ. ಡಿ.ಎಲ್. ಭಟ್ಕಳ್, ಸದಸ್ಯ ಕಾರ್ಯದರ್ಶಿಮಹದೇವ ಬಳಿಗಾರ್, ಸಂಯೋಜಕರಾದ ಆರ್ ನಟರಾಜ್, ಸದಸ್ಯರಾದ ಡಾ. ಮಿನಲ್ ನಾರ್ವೇಕರ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Exit mobile version