Follow Us On

WhatsApp Group
Big News
Trending

ಯುಗಾದಿ ನವವರ್ಷಾರಂಭದ ಸಂಭ್ರಮದ ದಿನ:ಪೌರಾಣಿಕ ಹಿನ್ನೆಲೆ:ಯುಗಾದಿಯ ಆಚರಣೆ ಹೇಗೆ?ಬೇವು-ಬೆಲ್ಲ ಸೇವನೆ ಮಹತ್ವ

ನಮ್ಮ ಪ್ರಾಚೀನ ಭಾರತೀಯ ಕಾಲಗಣನೆ ಪದ್ಧತಿ’ ಚಂದ್ರಮಾನ’ ಹಾಗೂ’ಸೌರಮಾನ’ಎಂದು ಎರಡುಬಗೆ. ಭೂಮಿಯಿಂದ ನೋಡಿದಾಗ ಸೂರ್ಯ-ಚಂದ್ರರ ಚಲನೆಯಲ್ಲಿ ಸ್ವಲ್ಪ ಸ್ವಲ್ಪವೇ ಬದಲಾವಣೆಯನ್ನು ಕಾಣುತ್ತೇವೆ. ಚಂದ್ರನ ಚಲನೆಯನ್ನು ಆಧರಿಸಿ ದಿನಗಣನೆ ಮಾಡುವುದನ್ನು’ಚಾಂದ್ರಮಾನ’ಪದ್ಧತಿ ಎಂದು, ಸೂರ್ಯನ ಗತಿಯನ್ನಾಧರಿಸಿ ಕಾಲ ಗಣನೆಮಾಡುವುದನ್ನು’ಸೌರಮಾನ’ಪದ್ಧತಿ ಎಂದು ಕರೆದಿದ್ದಾರೆ. ಚಾಂದ್ರಮಾನಪದ್ಧತಿಯ ಪ್ರಕಾರಕಾಲಗಣನೆಚೈತ್ರಶುಕ್ಲ ಪ್ರತಿಪತ್ (ಪಾಡ್ಯ) ದಿನದಿಂದ ಆರಂಭ. ಈ ಆರಂಭದ ದಿನವೇ ‘ಯುಗಾದಿ’. ‘ಯುಗ’ಎಂದರೆಹೊಸವರ್ಷ. ‘ಆದಿ’ಎಂದರೆ ಆರಂಭ. ಯುಗಾದಿ ಎಂದರೆ’ ಹೊಸವರ್ಷ ಆರಂಭವಾಗುವದಿನ’ವೆಂದರ್ಥ.

‘ಚೈತ್ರಶುಕ್ಲಪ್ರತಿಪದಿವತ್ಸರಾರಂಭಃ’
ಚೈತ್ರಮಾಸಿ ಜಗಜಗದ್ಬ್ರಹ್ಮಾ ಸಸರ್ಜ ಪ್ರಥಮೇಹನಿ|
ಶುಕ್ಲಪಕ್ಷೇ ಸಮಗ್ರಂತುತದಾ ಸುರ್ಯೋದಯೇ ಸತಿ||
ಚೈತ್ರಮಾಸಸ್ಯಯಾ ಶುಕ್ಲಾ ಪ್ರಥಮಾಪ್ರತಿಪದ್ಭವೇತ್|
ತದಹ್ನಿಃ ಬ್ರಹ್ಮಣಃಕೃತ್ವಾ ಸೋಪವಾಸಸ್ತು ಪೂಜನಮ್||
ಸಂವತ್ಸರಮವಾಪ್ನೋತಿ ಸೌಖ್ಯಾನಿ ಭೃಗುನಂದನ||(ನಿರ್ಣಯಸಿಂಧು)

ಎನ್ನುವಂತೆಯುಗಾದಿ ಎಂದರೆ’ಯುಗದ ಆದಿ’ಕೃತ-ತ್ರೇತ-ದ್ವಾಪರ-ಕಲಿಯುಗ ಎಂದು ಯುಗಗಳುನಾಲ್ಕು. ಸೃಷ್ಟಿಕರ್ತಬ್ರಹ್ಮನುಚೈತ್ರಮಾಸದಶುಕ್ಲಪಕ್ಷದಪಾಡ್ಯದಂದೇ, ಈ ಜಗತ್ತನ್ನುಸೃಷ್ಟಿಸಿದಹಾಗೂಜಗತ್ತಿನ ಜೀವಿಗಳಸೃಷ್ಟಿಕಾರ್ಯದಲ್ಲಿತೊಡಗಿದ. ಕಾಲಗಣನೆಗೆ ಬೇಕಾದಗ್ರಹ-ನಕ್ಷತ್ರ-ಮಾಸ-ಋತು-ವರ್ಷ-ವಷರ್ಾಪಧಿತಿಗಳನ್ನು ಸೃಷ್ಟಿಸಿ, ಕಾಲಗಣನೆಗೆ ಮೊದಲು ಮಾಡಿದ. ಈ ಕಾರಣಕ್ಕಾಗಿಯೇ’ಯುಗದ ಆರಂಭದದಿನವಾದ, ಈ ದಿನವನ್ನುಪ್ರತಿವರ್ಷವೂಯುಗಾದಿಹಬ್ಬವಾಗಿಆಚರಿಸುತ್ತಾಬಂದಿದ್ದೇವೆ. ವರ್ಷಪೂರ್ತಿ ನಮ್ಮ ಬಾಳುಸುಖವಾಗಿರಲಿಎಂದು ಈ ದಿನದಂದು ಇಷ್ಟದೇವತೆ, ಸೃಷ್ಟಿಕರ್ತಬ್ರಹ್ಮ, ವರ್ಷಾಧಿಪತಿಯಲ್ಲಿ ಪ್ರಾರ್ಥಿಸಿದರೆ, ಸೌಖ್ಯವನ್ನು ಹೊಂದುವರು.

ಪೌರಾಣಿಕ ಹಿನ್ನೆಲೆ: ಯುಗಾದಿ ಹಬ್ಬವು ಹಲವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಮೊದಲನೆಯದಾಗಿ ಸೃಷ್ಟಿಕರ್ತಬ್ರಹ್ಮ ಈ ದಿನದಿಂದಾರಂಭಿಸಿ ಸೃಷ್ಟಿಕಾರ್ಯದಲ್ಲಿತನ್ನನ್ನುತಾನು ತೊಡಗಿಸಿಕೊಂಡ ದಿನವಾಗಿದೆ. ಎರಡನೆಯದಾಗಿ, ಮಯರ್ಾದಾಪುರುಷೋತ್ತಮನಾದ ಶ್ರೀರಾಮನು ಪಿತೃವಾಕ್ಯ ಪರಿಪಾಲಕನಾಗಿ ಹದಿನಾಲ್ಕು ವರ್ಷ ವನವಾಸಕ್ಕೆ ತೆರಳಿ, ಅಂತ್ಯದಲ್ಲಿರಾವಣನನ್ನು ಸಂಹರಿಸಿ, ಅಯೋಧ್ಯೆಗೆ ಮರಳಿ, ಪಟ್ಟಾಭಿಷೇಕಗೊಂಡು ಅಯೋಧ್ಯೆಯ ಧರ್ಮಸಿಂಹಾಸನದಲ್ಲಿ ಪವಡಿಸಿ ರಾಜ್ಯಭಾರ ಮಾಡಲುತೊಡಗಿದ ದಿನ. ರಾಮನು’ರಾಜಾರಾಮ’ನಾದದಿನ. ರಾಮನ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದವಾನರರುಹಾಗೂ ಅಯೋಧ್ಯಾವಾಸಿಗಳಪಾಲಿಗೆ ಪ್ರೀತಿಯರಾಮ ಹಿಂತಿರುಗಿ, ಪಟ್ಟಾಭಿಷೇಕಗೊಂಡದ್ದನ್ನು ಕಣ್ತುಂಬಿಕೊಂಡುಸಂಭ್ರಮಪಟ್ಟದಿನ.

ಇದು ಅಂದಿಗೆಸೀಮಿತವಾಗದೆವರ್ಷವರ್ಷವೂಮುಂದುವರಿಯುತ್ತಾ ಈ ರೀತಿಯಾಗಿಆಚರಿಸುತ್ತಿದ್ದೇವೆ.
ಮೂರನೆಯದಾಗಿ ಶಾಲಿವಾಹನನು ಮಧ್ಯಭಾರತವನ್ನುಕೇಂದ್ರವಾಗಿಟ್ಟುಕೊಂಡು ಭಾರತವನ್ನು ಆಳ್ವಿಕೆ ಮಾಡುತ್ತಿದ್ದ. ಶಕರು ಈ ದೇಶದ ಮೇಲೆ ದಾಳಿ ಮಾಡಿದಾಗ, ಶಾಲಿವಾಹನನು ಶಕರನ್ನು ಸಮರ್ಥವಾಗಿ ಎದುರಿಸಿ ಸರ್ವನಾಶಗೊಳಿಸಿದ. ಶಾಲಿವಾಹನನು ಶಕರನ್ನುಗೆದ್ದ ದಿನವೇ ಚೈತ್ರಶುಕ್ಲ ಪಕ್ಷ ಪಾಡ್ಯ. ಅಂದರೆಯುಗಾದಿ ದಿನ. ಅಲ್ಲಿಯತನಕವಿದ್ದ ವಿಕ್ರಮಶಕೆಅಂತ್ಯಗೊಂಡು ಶಾಲಿವಾಹನಶಕೆ ಆರಂಭಗೊಂಡಿತು. ಆ ಯುದ್ದಗೆದ್ದ ಸಂಭ್ರಮ’ಯುಗಾದಿ’ಹಬ್ಬದ ಸಂಭ್ರಮವಾಗಿಆಚರಿಸುತ್ತಾ ಬಂದಿದ್ದೇವೆ. ಹೀಗೆ ಹತ್ತುಹಲವುವಿಶೇಷಗಳಿಂದ ಕೂಡಿದ ದಿನ ‘ಯುಗಾದಿ’ಯಾಗಿದೆ.

ಯುಗಾದಿಯ ಆಚರಣೆ ಹೇಗೆ? ವಸಂತಋತುವಿನ ಆಗಮನ ದಿನವಾದಯುಗಾದಿಯ ಸಂದರ್ಭದಲ್ಲಿ ಪ್ರಕೃತಿಯಗಿಡ- ಮರ-ಬಳ್ಳಿಗಳ ಹಳೆ ಎಲೆಗಳು ಉದುರಿ, ಹೊಸ ಚಿಗುರು, ಹೂವು, ಎಲೆಗಳಿಂದ ಕಂಗೊಳಿಸುತ್ತಾ, ನವೋತ್ಸಾಹವನ್ನು ಹೊಂದುವುದನ್ನುಕಾಣುತ್ತೇವೆ. ಪ್ರಕೃತಿಯಲ್ಲೂ, ಈ ಹೊಸ ಪ್ರಾಪ್ತೇ ನೂತನ ವತ್ಸರೇ ಪ್ರತಿಗೃಹಂಕುರ್ಯಾತ್‌ಧ್ವಜಾರೋಹಣಮ್|
ಸ್ನಾನಂ ಮಂಗಲಮಾಚರೇತ್ ದ್ವಿಜವರೈಃ ಸಾಕಂ ಸುಪೂಜ್ಯೋತ್ಸರೈಃ||
ದೇವಾನಾಂಗುರುಯೋಷಿತಾಂ ಚ ಶಿಶವೋಲಂಕಾರ ವಸ್ತ್ರಾದಿಭಿಃ|
ಸಂಪೂಜ್ಯಗಣಕಃ ಫಲಂಚ ಶ್ರುಣುಯಾತ್ತಸ್ಮಾಚ್ಚ ಲಾಭಪ್ರದಮ್||

ಎನ್ನುವಂತೆ, ಈ ದಿನ ಮನೆಯನ್ನು ತಳಿರು-ತೋರಣ, ರಂಗವಲ್ಲಿಯಿಂದ ಅಲಂಕರಿಸಿ, ಮನೆಯ ಮೇಲೆ ಓಂಕಾರ ಚಿಹ್ನೆಯುಳ್ಳ ಭಗಧ್ವಜವನ್ನು ಹಾರಿಸುವರು. ಇದನ್ನೇ ನಮ್ಮ ಪ್ರಾಚೀನಜನಪದರು’ಗುಡಿಪಾಡ್ಯ’ (ಗುಡಿ-ಬಾವುಟ) ಎನ್ನುವರು. ಇದುಹೊಸವರ್ಷದ ಆಗಮನಕ್ಕೆಬಾವುಟಹಾರಿಸಿಸಂಭ್ರಮಿಸುವುದರಸಂಕೇತವಾಗಿದೆ. ಈ ದಿನಪ್ರಾತಃಕಾಲದಲ್ಲಿಎದ್ದು, ತೈಲಾಭ್ಯಂಜನಮಾಡಿಕೊಂಡುಸ್ನಾನಮಾಡಿ,ವಿಶೇಷದೇವತಾರ್ಚನೆಪೂಜೆ-ಪುನಸ್ಕಾರ, ದೇವಾಲಯ ಸಂದರ್ಶನ ನಡೆಸಿ, ನವವಸ್ತ್ರಧಾರಣೆ ಮಾಡುವುದು.

ಗುರುಹಿರಿಯರ ಆಶೀವರ್ಾದ ಪಡೆದು ಬಂಧು-ಬಾಂಧವರು, ಇಷ್ಟ ಮಿತ್ರರೊಂದಿಗೆ, ಮಧ್ಯಾಹ್ನ ಭೋಜನದಲ್ಲಿ ಮೊದಲು ಬೇವು-ಬೆಲ್ಲದ ಮಿಶ್ರಣವನ್ನು ಸೇವಿಸಿ, ಹಬ್ಬದ ವಿಶೇಷ ಊಟದಲ್ಲಿಒಬ್ಬಟ್ಟುಅಥವಾ ಹೋಳಿಗೆಯನ್ನು ಸೇವಿಸುವರು. ಸಾಯಂಕಾಲ ಜ್ಯೋತಿಷಿಯ ಮೂಲಕ ಪಂಚಾಂಗ ಶ್ರವಣ ಮಾಡಿ, ನೂತನ ವರ್ಷದ ಗ್ರಹಸ್ಥಿತಿಯನ್ನು, ಮಳೆ-ಬೆಳೆ ಸಮೃದ್ಧಿಯನ್ನು, ಇವುಗಳ ಸಾಮಾನ್ಯ ಪೂರ್ವ ಸೂಚನೆಯನ್ನು ತಿಳಿದುಕೊಳ್ಳುವರು. ಭವಿಷ್ಯತ್ತಿನ ರೂಪುರೇಷೆಗಳ ಸಾಮಾನ್ಯಅರಿವು ನಮಗಿರಬೇಕು, ಎಂಬುದನ್ನುಇದು ಪ್ರತಿಧ್ವನಿಸುವುದು. ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು, ಹೊಸವರ್ಷದ ಸಂಭ್ರಮವನ್ನು ಸವಿಯುವರು. ನಮ್ಮ ಸಂಪ್ರದಾಯದಲ್ಲಿ’ನವರಾತ್ರಿ’ಯುಎರಡುಸಲಬರುವುದು. ‘ಶರನ್ನವರಾತ್ರಿ’ಹಾಗೂ’ವಸಂತನವರಾತ್ರಿ’. ದೇವಿಯಅನುಗ್ರಹಪ್ರಾಪ್ತಿಗಾಗಿ ಈ ಯುಗಾದಿಯಿಂದ ಪ್ರಾರಂಭವಾಗುವ’ವಸಂತನವರಾತ್ರಿ’ಯನ್ನುದೇಶದಹಲವೆಡೆ ಆಸ್ತಿಕರುಆಚರಿಸುವರು.

ಬೇವು-ಬೆಲ್ಲ ಸೇವನೆ ಮಹತ್ವ:– ಆಯುವರ್ೇದದ ಪ್ರಕಾರ ವಸಂತಋತುವಿನ ಪ್ರಾರಂಭದಲ್ಲಿಶರೀರದಲ್ಲಿಉಂಟಾಗುವ ಶಾರೀರಿಕದೋಷ ನಿವಾರಣೆಗೆ, ಬೇವು ಉತ್ತಮಔಷಧಿಯಾಗಿದೆ. ಬೇವು-ಬೆಲ್ಲ ಸೇವನೆಯಿಂದ ಶರೀರ ಸಮತೋಲನ ಉಂಟಾಗುವುದು.
ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯಚ|
ಸವರ್ಾರಿಷ್ಟವಿನಾಶಾಯ ನಿಂಬಕಂದಲಭಕ್ಷಣಮ್||

ಎಂದು ಹೇಳುತ್ತಾ,ಈ ದಿನ ಬೇವಿನೆಲೆಯನ್ನು ಸೇವಿಸುವುದರಿಂದ ದೀರ್ಘಆಯುಷ್ಯ, ವಜ್ರದಂತೆ ಶರೀರವುಧೃಡಕಾಯವಾಗುತ್ತದೆ. ಸರ್ವಅನಿಷ್ಟಗಳು ನಿವಾರಣೆಯಾಗಿ ಸರ್ವಸಂಪತ್ತುಗಳು ಲಭಿಸುವವು, ಎನ್ನುವಂತೆಜೀವನವೂಕೂಡಾ ಬೇವು-ಬೆಲ್ಲದ ಮಿಶ್ರಣದಂತೆ. ಈ ಜೀವನದಲ್ಲಿಹಗಲು-ರಾತ್ರಿ,ಸಿಹಿ-ಕಹಿ, ಸುಖ-ದುಃಖ, ಜ್ಞಾನ-ಅಜ್ಞಾನ, ಲಾಭ-ನಷ್ಟ, ಪ್ರೀತಿ-ದ್ವೇಷ, ಜಯ-ಪರಾಜಯಎಲ್ಲವೂ ಇದೆ. ಇವೆಲ್ಲವನ್ನೂ ಸಮಭಾವದಿಂದ ಸ್ವೀಕರಿಸಬೇಕೆಂಬ ತತ್ತ್ವವನ್ನು ಬೇವು-ಬೆಲ್ಲದ ಸೇವನೆಯು ಸಂಕೇತಿಸುವುದು.

ನಮ್ಮ ಭಾರತದೇಶವು ಹತ್ತಾರು ಭಾಷೆ-ಧರ್ಮ-ಸಂಸ್ಕೃತಿ-ಪ್ರಾದೇಶಿಕ ವೈವಿಧ್ಯದಿಂದಕೂಡಿದೆ. ಪ್ರಾಚೀನ ಕಾಲದಿಂದ ಇಲ್ಲಿಯವರೆಗೂ, ಇಲ್ಲಿಯ ಶ್ರೀಮಂತಸಂಸ್ಕೃತಿಯ ಜೊತೆಗೆ ಧಾರ್ಮಿಕ ನಂಬಿಕೆಗಳು ಹಾಗೆಯೇ ಉಳಿದುಕೊಂಡಿದೆ. ಯುಗಾದಿಯು ನಮ್ಮ ಪ್ರಾಚೀನ ಸಂಸ್ಕೃತಿಯ-ಧಾರ್ಮಿಕ ಶೃದ್ಧೆಯ ಹಬ್ಬವಾಗಿದ್ದು, ಹಳೆಯ ಕಹಿ ಕಳೆದು, ಭವಿಷ್ಯದಅನುಭವವೆಲ್ಲವೂ ಸಿಹಿಯಾಗುವಂತೆ ಈ ದಿನ ಭಗವಂತನಲ್ಲಿ ಪ್ರಾರ್ಥಿಸೋಣ.

ಲೇಖನ: ಶ್ರೀ ಗಣೇಶ ಭಟ್ಟ, ಸಂಸ್ಕೃತಉಪನ್ಯಾಸಕರು, ನೆಲ್ಲಿಕೇರಿ, ಕುಮಟಾ(ಉ.ಕ)

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button