Important
Trending

ವೇಗದ ಚಲಾವಣೆ, ಮದ್ಯಪಾನ ಮಾಡಿ ವಾಹನ ಚಲಾವಣೆ: ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಶಿರಸಿ: ವಾಹನಗಳಿಗೆ ಹೈ ಬೀಂ ಲೈಟ್ ಅಳವಡಿಸಿ ವಾಹನ ಚಲಾವಣೆ , ಖಾಸಗಿ ಬಸ್‌ಗಳ ಅತೀವೇಗ ಚಲಾವಣೆ,ಮದ್ಯಪಾನ ಸೇವಿಸಿ ವಾಹನ ಚಲಾಯಿಸುತ್ತಿರುವ ವಾಹನಗಳ ಚಾಲಕರಿಗೆ ಶಿರಸಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪಟ್ಟಣದ ಸಾಮ್ರಾಟ್ ಹೊಟೇಲ್ , ಅಶ್ವಿನಿ ಸರ್ಕಲ್,ರಾಘವೇಂದ್ರ ಸರ್ಕಲ್, ಶಿವಾಜಿ ಚೌಕ, ಜೂ ಸರ್ಕಲ್, ಐದು ರಸ್ತೆ ಸರ್ಕಲ್, ನೀಲೆಕಣಿ, ಯಲ್ಲಾಪುರ ನಾಕಾ ಪ್ರಮುಖ ಸ್ಥಳಗಳಲ್ಲಿ ರಾತ್ರಿ ಪೊಲೀಸರು ವಾಹನ ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ ಖಾಸಗಿ ಕಾರು ಮತ್ತು ಬಸ್‌ಗಳ ವಿರುದ್ಧ ಹೈ ಭೀಮ್ ಲೈಟ್ ಬಳಿಸಿದ ಕಾರಣ ಮತ್ತು ಅತಿವೇಗದ ಚಾಲನೆ ಸೇರಿ ಒಟ್ಟು ಆರು ಪ್ರಕರಣ ದಾಖಲಿಸಿದರು. ಅಲ್ಲದೆ, ಗೋಕರ್ಣದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದು, ಆಲ್ಕೋಮೀಟರ್ ಮೂಲಕ ಕಂಡುಬoದಿದ್ದು ಆತನ ವಿರುದ್ಧ ಪ್ರಕತಣ ದಾಖಲಿಸಿ ಆ ಚಾಲಕನನ್ನು ಬದಲಿಸಿ ಬೇರೆ ಚಾಲಕನ ಮೂಲಕ ಬಸ್ ಪ್ರಯಾಣಿಸಲು ಅನೂಕಲ ಮಾಡಿಕೊಡಲಾಯಿತು. ಈ ಕಾರ್ಯಾಚರಣೆಯಲ್ಲಿ ಡಿಎಸ್‌ಪಿ ಗಣೇಶ್ ಕೆ ಎಲ್ ರವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ, ಪಿಎಸ್‌ಐ ರವರುಗಳಾದ ಭೀಮಶಂಕರ್, ರಾಜ್ ಕುಮಾರ್,ಎಎಸ್‌ಐ ಹೊಸಕಟ್ಟಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಸ್ಮಯ ನ್ಯೂಸ್, ಶಿರಸಿ

Back to top button