ಗೋವಾದಿಂದ ಕೇರಳಕ್ಕೆ ಅಕ್ರಮ ಮದ್ಯ ಸಾಗಾಟ ಯತ್ನ? 10 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಿದ ಪೊಲೀಸರು : ನೆನೆಗುದಿಗೆ ಬಿದ್ದ ಪ್ರಕರಣಗಳಿಗೆ ಮರುಜೀವ
ಅಂಕೋಲಾ: ಎಸ್ಪಿ ಶಿವಪ್ರಕಾಶ ದೇವರಾಜ(I.P.S), ಹಾಗೂ ಇತರೆ ಹಿರಿಯ ಅಧಿಕಾರಿಗಳ ಖಡಕ್ ಆದೇಶದಿಂದ ಜಿಲ್ಲೆಯ ನಾನಾ ಠಾಣೆಗಳಲ್ಲಿ ನೆನೆಗುದ್ದಿಗೆ ಬಿದ್ದ ಪ್ರಕರಣಗಳು ಮರುಜೀವ ಕಾಣುತ್ತಿದ್ದು, ಹತ್ತಿಪ್ಪತ್ತು ವರ್ಷಗಳಿಂದ ಪೊಲೀಸರ ಕಣ್ಣುತಪ್ಪಿಸಿ ಒಡಾಡಿಕೊಂಡಿದ್ದ ರಾಜ್ಯ_ಹೊರರಾಜ್ಯದ ಹಲವು ಆರೋಪಿಗಳ ಬಂಧನ ಕಾರ್ಯಾಚರಣೆ ಜೋರಾಗಿ ನಡೆದಿದೆ.
2011 ರಲ್ಲಿ ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪದಡಿ ಪ್ರಕರಣ ದಾಖಲಾದ ಹತ್ತು ವರ್ಷದ ಬಳಿಕ ಅಂಕೋಲಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿ, ಎಪ್ರಿಲ್ 13 – 2021ರ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಕೇರಳದ ಕಾಸರಗೋಡ ಜಿಲ್ಲೆಯ ಚಂದ್ರಗಿರಿಯ ಚೆನ್ಮಾಡದ ಅಬ್ದುಲ್ ಮುನೀರ್ ಉಬೇದ್(36) ಬಂಧಿತ ಆರೋಪಿಯಾಗಿದ್ದು, ಅಲಗೇರಿ ಕ್ರಾಸ್ ಬಳಿ ಈ ಹಿಂದೆ (2011 ರಲ್ಲಿ) ದಾಖಲಿಸಲಾದ ಅಬಕಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಹತ್ತು ವರ್ಷಗಳಿಂದ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. . ಖಚಿತ ಮಾಹಿತಿಯ ಮೇರೆಗೆ ಕೇರಳಕ್ಕೆ ತೆರಳಿದ (ಕರ್ನಾಟಕ) ಪೊಲೀಸರು ಆರೋಪಿಯನ್ನು ಬಂಧಿಸಿ ಅಂಕೋಲಾ ಜೆಎಂಎಫ್ ಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರೇಮನಗೌಡ ಪಾಟೀಲ್ , ಅಪರಾಧ ವಿಭಾಗದ ಹಿರಿಯ ಹವಾಲ್ದಾರ ಮೋಹನದಾಸ ಶೇಣ್ವಿ, ಮಂಜುನಾಥ ಲಕ್ಮಾಪುರ, ಮನೋಜ್ ಅವರನ್ನೊಳಗೊಂಡ ತಂಡ ಬಂಧನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕಿನಲ್ಲಿ ಇಂತಹ ಹತ್ತಕ್ಕೂ ಹೆಚ್ಚು ಪ್ರಕರಣಗಳಿರುವ ಸಾಧ್ಯತೆ ಇದ್ದು, ಪೋಲಿಸ್ ಇಲಾಖೆ ಮತ್ತಷ್ಟು ಚುರುಕಾಗಿ ಕಾರ್ಯಾಚರಣೆ ನಡೆಸಿ ಇಲಾಖೆಯ ಹಿರಿಯ ಅಧಿಕಾರಿಗಳ ಆಶಯಕ್ಕನುಗುಣವಾಗಿ, ಈ ಹಿಂದಿನ ಎಲ್ಲಾ ಪ್ರಕರಣ ಭೇದಿಸುವಲ್ಲಿ ತನ್ನ ಗಟ್ಟಿತನ ತೋರಬೇಕಿದೆ ಮತ್ತು ಆ ಮೂಲಕ ಮಾತ್ರ ಹಿರಿಯರ ಪ್ರಶಂಸೆ ಗಳಿಸಬೇಕಿದೆ ಎನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..