Follow Us On

WhatsApp Group
Focus News
Trending

ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಜನದಟ್ಟಣೆ : ನಿಯಂತ್ರಣಕ್ಕೆ ಮುಂದಾದ ತಾಲೂಕಾಡಳಿತ| ಮಾವಿನ ಹಣ್ಣು ತರಕಾರಿ ಮಾರಾಟಕ್ಕೆ ಪ್ರತ್ಯೇಕ ಸ್ಥಳ ನಿಗದಿ

ಅಂಕೋಲಾ – ಕೊವಿಡ್ ಹಿನ್ನೆಲೆಯಲ್ಲಿ 14 ದಿನಗಳ ಲಾಕ್ ಡೌನ್ ಕರ್ಫ್ಯೂ ಜಾರಿಯಲ್ಲಿದ್ದು, ಅತ್ಯವಶ್ಯ ಸಾಮಗ್ರಿಗಳ ಖರೀದಿ ಮತ್ತು ಮಾರಾಟಕ್ಕೆ ಬೆಳಗಿನ 6 ಗಂಟೆಯಿಂದ 10 ಗಂಟೆ ವರೆಗೆ ಕಾಲಾವಕಾಶ ನಿಗದಿಪಡಿಸಲಾಗಿದೆ. ಈ ವೇಳೆ ನಾನಾ ಕಾರಣಗಳಿಂದ ಪುರಸಭೆ ಎದುರಿನ ಮುಖ್ಯರಸ್ತೆಯಲ್ಲಿ ಜನ ಜಂಗುಳಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗ ಪ್ರಸರಣದ ಭೀತಿ ಬಗ್ಗೆ ಪ್ರಜ್ಞಾವಂತ ವಲಯದಿಂದ ಅಕ್ಷೇಪ ಕೇಳಿ ಬಂದಿತ್ತು.

ತರಕಾರಿ ಮತ್ತು ಹಣ್ಣುಗಳ ವ್ಯಾಪಾರಕ್ಕೆ ಸರಿಯಾದ ಸ್ಥಳವಕಾಶ ಇರದೇ ಇಕ್ಕಟ್ಟಾದ ರಸ್ತೆಯಲ್ಲೇ ವ್ಯಾಪಾರ ವಹಿವಾಟು ಹೆಚ್ಚಿತ್ತಿರು ವುದನ್ನು ಗಮನಿಸಿದ ಹೆಚ್ಚುವರಿ ಪ್ರಭಾರ ತಹಶೀಲ್ದಾರ ಮಂಜುಳಾ ಭಜಂತ್ರಿ , ಹಣ್ಣು ತರಕಾರಿ ಮಾರಾಟಕ್ಕೆ ಪ್ರತ್ಯೇಕ ಸ್ಥಳ ಗೊತ್ತುಪಡಿಸಿ, ಜನಸಾಂದ್ರತೆ ಕಡಿಮೆ ಮಾಡಲು ಆದೇಶ ಹೊರಡಿಸಿದ್ದಾರೆ.
. ಈ ಮೊದಲು ಆಗಾಗ ಸಂತೆ ನಡೆಯುತ್ತಿದ್ದ ಶ್ರೀ ವೆಂಕಟರಮಣ ದೇವಸ್ಥಾನದ ರಥ ಬೀದಿಯಲ್ಲಿ ಕೆಲ ಜಾತಿಯ ಹಣ್ಣು ಮತ್ತು ತರಕಾರಿ ಮಾರಾಟ, ಹಳ್ಳಿಗಳಲ್ಲಿ ಬೆಳೆದ ತರಕಾರಿ ತಂದು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ.

ತಾಲೂಕಿನಲ್ಲಿ ಮಾವಿನ ಹಣ್ಣಿನ ಹಂಗಾಮ ಶುರುವಾಗಿದ್ದು, ಸ್ಥಳೀಯ ಬೆಳೆಗಾರರು ಮಾರುಕಟ್ಟೆಯಿಲ್ಲದೇ ಸಂಕಷ್ಟದಲ್ಲಿವುದನ್ನು ಮನಗಂಡಿರುವ ಅಧಿಕಾರಿಗಳು, ಮಾವು ಬೆಳೆಗಾರರ ಮತ್ತು ಮಾರಾಟಗಾರರ ಹಿತರಕ್ಷಣೆಗಾಗಿ ಎಪ್ರಿಲ್ . 30 ರ ಶುಕ್ರವಾರದಿಂದ ಮುಂದಿನ ಆದೇಶದ ವರೆಗೆ ಪ್ರೌಢಶಾಲೆ ಮತ್ತು ಪೋಸ್ಟ್ ಆಫೀಸ್ ಎದುರಿನ ವಿಶಾಲ ರಸ್ತೆಯಲ್ಲಿ ಮಾವಿನ ಹಣ್ಣು ಮಾರಾಟಕ್ಕೆ ತಾತ್ಕಾಲಿಕ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಪಟ್ಟಣ ವ್ಯಾಪ್ತಿಯಲ್ಲಿ ತರಕಾರಿ ಅಂಗಡಿಗಳನ್ನಿಟ್ಟು ತರಕಾರಿ ಮಾರಾಟ ಮಾಡುತ್ತಿರುವವರು ಮೂಲ ಸ್ಥಳದಲ್ಲಿಯೇ ಮಾರಾಟ ಮಾಡಬೇಕು ಮತ್ತು ಫುಟ್ ಪಾತ್ ಅತಿಕ್ರಮಿಸದಂತೆ ಹಾಗೂ ಮಾಸ್ಕ್ ಧರಿಸಿಯೇ ವ್ಯಾಪಾರ ನಡೆಸುವಂತೆ, ತಹಶೀಲ್ದಾರರು ಖಡಕ್ ಆದೇಶನೀಡಿದ್ದಾರೆ.
ನಿಗದಿತ ಅವಧಿ ಮೀರಿ ವ್ಯಾಪಾರ ವಹಿವಾಟು ನಡೆಸುವವರು, ಅನಗತ್ಯ ಓಡಾಡುವವರ ವಿರುದ್ಧ ಎಚ್ಚರಿಕೆ ನೀಡಿ ದಂಡ ವಿಧಿಸುವಂತೆ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಹಾಗೂ ಪೋಲೀಸರಿಗೆ ತಹಶೀಲ್ದಾರರು ಸೂಚಿಸಿದ್ದಾರೆ.

ಜನದಟ್ಟಣೆ ನಿಯಂತ್ರಿಸಲು ಮುಂದಾಗಿರುವ ತಾಲೂಕಾಡಳಿತದ ಜೊತೆ, ಪುರಸಭೆ ಮುಖ್ಯಾಧಿಕಾರಿ ಬಿ ಪ್ರಲ್ಲಾಧ್, ಸಿಪಿಐ ಕೃಷ್ಣಾನಂದ ನಾಯಕ, ಪಿ ಎಸೈ ಈ ಸಿ ಸಂಪತ್, ಉಪ ತಹಶೀಲದಾರ ಸುರೇಶ ಹರಿಕಂತ್ರ, ಗ್ರಾಮಲೆಕ್ಕಾಧಿಕಾರಿ ಭಾರ್ಗವ ನಾಯಕ ಸ್ಥಳ ಪರಿಶೀಲಿಸಿ, ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದರು.
ಈ ತಾತ್ಕಾಲಿಕ ಬದಲಾವಣೆಯನ್ನು ಗಮನಿಸಿ,ಕೊವಿಡ್ ನಿಯಂತ್ರಣದ ನಂತರದ ದಿನಗಳಲ್ಲಿ ಸರ್ಕಾರದ ಹೊಸ ಆದೇಶವಾಗುವ ವರೆಗೆ, ಸಮುದಾಯದ ಆರೋಗ್ಯ ಹಿತದೃಷ್ಟಿಯಿಂದ ಹಣ್ಣು ತರಕಾರಿ ವ್ಯಾಪಾರಸ್ಥರು , ಸಾರ್ವಜನಿಕರು ಸಹಕರಿಸುವಂತೆ ತಾಲೂಕಾ ಆಡಳಿತದ ಪರವಾಗಿ ಕೋರಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..

Back to top button