ಕುಮಟಾ.: ಮನೆಯಿಂದ ಹತ್ತಿರದ ಅಂಗಡಿಗೆ ಸೇರಿದಂತೆ ಇನ್ನಿತರ ಚಿಕ್ಕ ತಿರುಗಾಟಕ್ಕೂ ಸಹ ವಾಹನವನ್ನು ಬಳಸುವ ಈ ಕಾಲದಲ್ಲಿ ಒಬ್ಬಂಟಿಯಾಗಿ ಸಾವಿರಾರು ಕೀ.ಮೀ ಕಾಲ್ನಡೆಗೆಯ ಮೂಲಕ ಸಾಗುತ್ತಿರುವ ಈ ಭೂಪನಿಗೆ ನಮ್ಮದೊಂದು ಸಲಾಂ.
ಹೌದು.. ಹಿಮಾಚಲ ಪ್ರದೇಶದಿಂದ ಕೆರಳಾಕ್ಕೆ ಕಾಲ್ನಡಿಗೆಯ ಮೂಲಕ ತಲುಪಬೆಕೆಂಬ ಗುರಿಯನ್ನು ಹೊತ್ತು ಸಾಗುತ್ತಿರುವ ಹಿಮಾಚಲ ಪ್ರದೇಶದ ಮನಾಲಿ ಎಂಬ ಪುಟ್ಟ ಜಿಲ್ಲೆಯ ವಿರೇಂದ್ರ ಠಾಕೂರ್ ಅವರು ಕುಮಟಾ ಪಟ್ಟಣಕ್ಕೆ ಆಗಮಿಸಿದ್ದರು.
ಹಿಮಾಚಲ ಪ್ರದೇಶದಿಂದ ಮಾರ್ಚ್ 25 ರಂದು ಕಾಲ್ನಡಿಗೆ ಪ್ರಾರಂಭಿಸಿದ ಇವರು ಇಂದು ಕುಮಟಾಕ್ಕೆ ಬಂದು ತಲುಪಿದ್ದು, ಇನ್ನು ಆರೇಳು (6-7) ದಿನಗಳ ಓಳಗಾಗಿ ತಮ್ಮ ಗುರಿಯಾದ ಕೇರಳವನ್ನು ತಲುಪಲಿದ್ದಾರೆ.
ಈ ಸಂಬoಧ ನಮ್ಮ ವಿಸ್ಮಯ ಟಿ.ವಿ ಯೊಂದಿಗೆ ಮಾತನಾಡಿದ ವಿರೇಂದ್ರ ಠಾಕೂರ್ ಅವರು, ನಮ್ಮ ಭಾರತೀಯ ಸಂಸ್ಕೃತಿ, ಆಹಾರ ಪದ್ದತಿ, ಮಾನವೀಯತೆ ಮುಂತಾದವುಗಳನ್ನು ಅನ್ವೇಷಿಸುವ ನಿಟ್ಟಿನಲ್ಲಿ ಈ ಒಂದು ಕಾಲ್ನಡಿಗೆ ಪ್ರವಾಸನ್ನು ಕೈಗೊಂಡಿದ್ದೇನೆ. ಜೊತೆಗೆ ಹೆಚ್ಚಿನದಾಗಿ ಎಲ್ಲರೂ ಸಹ ಚಿಕ್ಕ ಚಿಕ್ಕ ತಿರುಗಾಟಕ್ಕೂ ಕೂಡ ವಾಹನವನ್ನು ಬಳಸುತ್ತಾರೆ, ಈ ಅಭ್ಯಾಸವು ನಮ್ಮ ಪರಿಸರಕ್ಕೆ ಹಾಗೂ ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ನಾನು ಹಿಮಾಚಲ ಪ್ರದೇಶದಿಂದ ಕೇರಳಾಕ್ಕೆ ಸುಲಭವಾಗಿ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದೇನೆ. ಹೀಗಿರುವಾಗ ಹತ್ತಿರದ ಅಂಗಡಿಗಳಿಗೆ ಸಾರ್ವಜನಿಕರು ಸುಲಭವಾಗಿ ಕಾಲ್ನಡಿಗೆಯ ಮೂಲಕ ತೆರಳಬಹುದು. ಆದ ಕಾರಣ ಎಲ್ಲರೂ ಸಹ ಪರಿಸರವನ್ನು ಸಂರಕ್ಷಿಸಿ ಹಾಗೂ ಭಾರತವನ್ನು ಸ್ವಚ್ಚ ಹಾಗೂ ಹಸಿರಿನಿಂದ ಕೂಡಿರುವಂತೆ ನೋಡಿಕೊಳ್ಳಿ ಎಂದರು.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888..
ವಿಸ್ಮಯ ನ್ಯೂಸ್, ಯೋಗೇಶ ಮಡಿವಾಳ, ಕುಮಟಾ.