Important
Trending

18 ಮಹಿಳೆಯರನ್ನು ಸಾಯಿಸಿದ: ಇದಕ್ಕೆ ಈತ ಕೊಟ್ಟ ಸಮರ್ಥನೆ ಏನು ಗೊತ್ತಾ?

ಹೈದರಾಬಾದ್: 45 ವರ್ಷದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು, ಆತನ ಕೃತ್ಯವನ್ನು ನೋಡಿ ಆಘಾತಗೊಂಡಿದ್ದರು. ಒಂದಲ್ಲ, ಎರಡಲ್ಲ, ಬರೊಬ್ಬರಿ 18 ಮಹಿಳೆಯರನ್ನು ಈತ ಸಾಯಿಸಿದ್ದ. ಈತನ ಅಪರಾಧ ಕೃತ್ಯ ಕಾಣುತ್ತಲೇ ಪೊಲೀಸರು ಒಂದು ಕ್ಷಣ ದಂಗಾಗಿದ್ದರು. ಈ ಘಟನೆ ನಡೆದಿದ್ದು, ಹೈದರಾಬಾದ್‌ನಲ್ಲಿ.

ಈತ ವಿರುದ್ಧ 2 ಕೊಲೆ ಪ್ರಕರಣ ಸಾಬೀತಾಗಿದ್ದು, 16 ಪ್ರಕರಣ ತನಿಖೆಯಲ್ಲಿದೆ. ಇದಲ್ಲದೆ ಆಸ್ತಿಗೆ ಸಂಬoಧಿಸಿದ ಗಲಭೆ ಸೇರಿದಂತೆ ಒಟ್ಟು 21 ಪ್ರಕರಣಗಳು ಈತನ ಮೇಲೆ ದಾಖಲಾಗಿದೆ. 2003 ರಿಂದಲೇ ಇಂಥ ದುಷ್ಕೃತ್ಯದಲ್ಲಿ ತೊಡಗಿದ್ದ ಈತ ಬರೊಬ್ಬರಿ 18 ಮಹಿಳೆಯನ್ನು ಸಾಯಿಸಿದ್ದಾನೆ. ಮೊದಲು ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಈತ ನಂತರ ಅವರನ್ನು ಸಾಯಿಸಿ, ಅವರ ಬಳಿಯಿದ್ದ ಚಿನ್ನಾಭರಣ ದೋಚುತ್ತಿದ್ದ.

ದ್ವೇಷಿಯಾಗಿ ಬದಲಾಗಲು ಕಾರಣ ಏನು ಗೊತ್ತಾ?

ರಾಮುಲು ಎಂಬ ಹೆಸರಿನ ಈ ವ್ಯಕ್ತಿ ಕಾರ್ಮಿಕ ಕೆಲಸ ಮಾಡಿಕೊಂಡಿದ್ದು, ತನ್ನ 21 ವಯಸ್ಸಿಗೆ ಮದುವೆ ಆಗಿದ್ದ. ಆದರೆ, ಈ ಮದುವೆಯ ಸಂಭ್ರಮ ಹೆಚ್ಚುದಿನ ಇರಲಿಲ್ಲ. ಮದುವೆಯಾದ ಕೆಲವೇ ದಿನಗಳಲ್ಲಿ ಈತನ ಪತ್ನಿ ಬೇರೆಯವರೊಬ್ಬರೊಂದಿಗೆ ಓಡಿಹೋಗಿದ್ದಳು. ಇದರಿಂದ ಮಾನಸಿಕ ಆಘಾತಗೊಂಡಿದ್ದ ಈತ ಮಹಿಳೆಯನ್ನು ದ್ವೇಷಿಸುತ್ತಾ, ಹಗೆ ಸಾಧಿಸುತ್ತಿದ್ದ ಎಂಬ ವಿಷಯ ತಿನಿಖೆಯಲ್ಲಿ ತಿಳಿದುಬಂದಿದೆ..

2009ರಲ್ಲಿ ಪ್ರಕರಣವೊಂದಕ್ಕೆ ಸಂಬoಧಪಟ್ಟ0ತೆ ಈತನಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿತ್ತು. ಆದರೆ, ಚಾಲಾಕಿ ರಾಮುಲು ಅಲ್ಲಿಂದ ತಪ್ಪಿಸಿಕೊಂಡಿದ್ದ. 2018ರಲ್ಲಿ ಪೊಲೀಸರು ಈತನನ್ನು ಮತ್ತೆ ಬಂಧಿಸಿದ್ದರು. ಆಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಸದ್ಯ ಈ ಅಪಾಯಕಾರಿ ವ್ಯಕ್ತಿಯನ್ನು ಬಂಧಿಸುವ ಹೈದ್ರಾಬಾದ್ ಪೊಲೀರು, ಈತನ ವಿರುದ್ಧದ ಎಲ್ಲಾ ಪ್ರಕರಣಗಳನ್ನು ತನಿಖೆಮಾಡುತ್ತಿದ್ದಾರೆ. ಈತನ ವಿರುದ್ಧ ಇಂಚಿoಚು ಮಾಹಿತಿ ಕಲೆಹಾಕುತ್ತಿದ್ದಾರೆ. ಅಲ್ಲದೆ, ಸುದ್ದಿಗೋಷ್ಠಿ ನಡೆಸಿ ಈತನ ಪ್ರಕರಣ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button