
ಹೊನ್ನಾವರದಲ್ಲಿ ಏಳು ಜನರಲ್ಲಿ ಕರೊನಾ ದೃಢ
ಅಂಕೋಲಾದಲ್ಲಿ ಇಂದು ಒಂದು ಪಾಸಿಟಿವ್
ಹೊನ್ನಾವರ: ತಾಲೂಕಿನಲ್ಲಿ ಇಂದು ಏಳು ಜನರಲ್ಲಿ ಸೋಂಕು ಪತ್ತೆಯಾಗಿದೆ. ಪಟ್ಟಣದ ಪ್ರಭಾತನಗರದ 56 ವರ್ಷದ ಮಹಿಳೆ, 22 ವರ್ಷದ ಯುವತಿ, ಗಾಂಧಿನಗರದ 35 ವರ್ಷದ ಯುವಕ, 40 ವರ್ಷದ ಪುರುಷ, ಹಳದೀಪುರದ 49 ವರ್ಷದ ಮಹಿಳೆ ಮತ್ತು 75 ವರ್ಷದ ಮಹಿಳೆ, ಗುಣವಂತೆಯ 15 ವರ್ಷದ ಬಾಲಕಿ ಸೇರಿದಂತೆ ಇಂದು ತಾಲೂಕಿನಲ್ಲಿ ಏಳು ಪ್ರಕರಣ ದಾಖಲಾಗಿದೆ. ಇದರಿಂದಾಗಿ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 228 ಕ್ಕೆ ಏರಿಕೆಯಾಗಿದೆ. 40 ಜನರಿಗೆ ಹೋಮ್ ಐಷೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ
ಅಂಕೋಲಾದಲ್ಲಿ ಇಂದು ಒಂದು ಕೇಸ್ ದೃಢ:
ಸಕ್ರೀಯ ಸೋಂಕಿತರ ಸಂಖ್ಯೆ 11
ಅಂಕೋಲಾ : ಪಟ್ಟಣದ ಹುಲಿದೇವರವಾಡ ವ್ಯಾಪ್ತಿಯ 56ರ ಪುರುಷನೋರ್ವನಲ್ಲಿ ರವಿವಾರ, ಜ್ವರ ಲಕ್ಷಣಗಳುಳ್ಳ(ಐ.ಎಲ್.ಐ ಮಾದರಿ) ಪಾಸಿಟಿವ್ ಲಕ್ಷಣಗಳು ಕಾಣಿಸಿಕೊಂಡಿದ್ದು, ಒಟ್ಟೂ ಸಕ್ರೀಯ ಪ್ರಕರಣಗಳ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಇಂದು ತಾಲೂಕಿನ ಯಾವುದೇ ಭಾಗಗಳಲ್ಲಿ ಜನರ ಗಂಟಲುದ್ರವ ಮಾದರಿ ಸಂಗ್ರಹಿಸಿಲ್ಲಾ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.