Focus News
Trending

ಅಗಸ್ಟ್ 1 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಅಂಕೋಲಾ: ಕೆ.ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆಯವರ 76ನೇ ಜನ್ಮ ದಿನಾಚರಣೆ ಪ್ರಯುಕ್ತ ಅಂಕೋಲಾದ ಕೆ.ಎಲ್.ಇ ಸಮೂಹ ಸಂಸ್ಥೆಗಳು ಇತರೆ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದೆ. ಲಯನ್ಸ್ ಕ್ಲಬ್ ಅಂಕೋಲ, ಕರಾವಳಿ ಎಲ್.ಐ.ಸಿ ಪ್ರತಿನಿಧಿಗಳ ಒಕ್ಕೂಟ ಕುಮಟಾ ಹಾಗೂ ಅಂಕೋಲಾದ ಸಹಯೋಗದಲ್ಲಿ ಅಗಸ್ಟ್ 1 ರಂದು , ಕೆ. ಎಲ್. ಇ ಸಂಸ್ಥೆಯ ಸಭಾಭವನದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದ್ದು, ಆಸಕ್ತ ರಕ್ತದಾನಿಗಳು, ರಕ್ತಧಾನ ಮಹಾದಾನ ಎಂಬ ಧ್ಯೇಯ ವಾಕ್ಯದಂತೆ ಸದರಿ ಶಿಬಿರದಲ್ಲಿ ಹಾಜರಿದ್ದು, ರಕ್ತದಾನದಲ್ಲಿ ಪಾಲ್ಗೊಂಡು,ಶಿಬಿರ ಯಶಸ್ವಿಗೊಳಿಸಲು ಕೆ. ಎಲ್.ಇ.ಸಮೂಹ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಾ. ಡಿ.ಎಲ್. ಭಟ್ಕಲ್ ಸಂಯೋಜಕರಾದ ಆರ್. ನಟರಾಜ್ ಸದಸ್ಯರಾದ ಡಾ.ಮಿನಲ್ ನಾರ್ವೇಕರ್ ಹಾಗೂ ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ಪ್ರಾಚಾರ್ಯ ಡಾ. ವಿನಾಯಕ್ ಜಿ ಹೆಗಡೆ 9480048963 ಅವರನ್ನು ಸಂಪರ್ಕಿಸಬಹುದಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button